ಕುಮಾರಸ್ವಾಮಿ ಭಜನೆ ಮಾಡೋದೇ ಕಾಂಗ್ರೆಸ್ ಧ್ವನಿಯಾಗಿದೆ : ಮಾಜಿ ಸಿಎಂ ಹೆಚ್ ಡಿಕೆ ವ್ಯಂಗ್ಯ

ರಾಯಚೂರು : ಕುಮಾರಸ್ವಾಮಿ ಭಜನೆ ಮಾಡೋದೇ ಕಾಂಗ್ರೆಸ್ ನ ಧ್ವನಿಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಧ್ವನಿ ಸಮಾವೇಶಕ್ಕಾಗಿ ಕಾಂಗ್ರೆಸ್ ನಾಯಕರ ದಂಡೇ ಹೋಗುತ್ತಿದೆ.
ನಾನು ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿಲ್ಲ. ವಿಸರ್ಜನೆ ಮಾಡ್ತೀನಿ ಅಂತಾ ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಎಂದಿದ್ದೇನೆ ಎಂದು ಹೇಳಿದ್ದಾರೆ.