ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ.! ಮೈಸೂರು ರಸ್ತೆಯಲ್ಲಿ ಗಡ್ಕರಿ ಟೆಸ್ಟ್ ಡ್ರೈವ್.
ಬೆಂಗಳೂರು : ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಾಳೆ ಬೆಂಗಳೂರಿಗೆ ಬರ್ತಿದ್ದಾರೆ, ಮೈಸೂರು ರಸ್ತೆಯಲ್ಲಿ ನಿತಿನ್ ಗಡ್ಕರಿ ಟೆಸ್ಟ್ ಡ್ರೈವ್ ಮಾಡಲಿದ್ದಾರೆ. ಹೆದ್ದಾರಿ ಮೇಲೆ ಹೆಲಿಕಾಪ್ಟರ್ ಇಳಿಸಿ ವೀಕ್ಷಣೆ ನಡೆಸಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಸಚಿವರ ಸಾಥ್ ನೀಡಲಿದ್ದಾರೆ. ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿಯಲ್ಲಿ ಹೆಲಿಪಾಡ್ ನಿರ್ಮಾಣವಾಗಲಿದ್ದು, ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸುತ್ತಾರೆ.
ಮೊದಲ ಹಂತದಲ್ಲಿ ಕೆಂಗೇರಿ - ನಿಡಘಟ್ಟ ಹೆದ್ದಾರಿ ಕಾಮಗಾರಿ ಪೂರ್ಣ, ಎರಡನೇ ಹಂತದಲ್ಲಿ ನಿಡಘಟ್ಟ - ಮೈಸೂರುವರೆಗೆ ಕಾಮಗಾರಿ ನಡೆಯುತ್ತಿದೆ. ಪ್ರಧಾನಿ ಮೋದಿ ಮಾರ್ಚ್ ಮೊದಲ ವಾರ ಹೆದ್ದಾರಿ ಲೋಕಾರ್ಪಣೆ ಮಾಡಲಿದ್ದಾರೆ. ಸತತ ಮಳೆ ಸುರಿದ ವೇಳೆ ಭಾರೀ ಸುದ್ದಿಯಾಗಿದ್ದ ಮೈಸೂರ್ ಎಕ್ಸ್ಪ್ರೆಸ್ವೇ, ವಾಹನಗಳ ವೇಗಕ್ಕೆ ಮಿತಿ ಇಲ್ಲದೇ ಕೆಲವೆಡೆ ಅಪಘಾತ ನಡೆದಿದ್ದವು. ಈ ಕಾರಣದಿಂದಾಗಿಯೇ ನಿತಿನ್ ಗಡ್ಕರಿ ಖುದ್ದು ವೀಕ್ಷಣೆ ಮಾಡಲಿದ್ದಾ