ಮೇಕೆದಾಟು ಯೋಜನೆ ಜಾರಿ ಬಗ್ಗೆ ಜಲಶಕ್ತಿ ಸಚಿವರಿಗೆ ಮನವರಿಕೆ; ಶೀಘ್ರವೇ ಡಿಪಿಆರ್ಗೆ ಮಾನ್ಯತೆ:ಸಿಎಂ ಬೊಮ್ಮಾಯಿ

ಮೇಕೆದಾಟು ಯೋಜನೆ ಜಾರಿ ಬಗ್ಗೆ ಜಲಶಕ್ತಿ ಸಚಿವರಿಗೆ ಮನವರಿಕೆ; ಶೀಘ್ರವೇ ಡಿಪಿಆರ್ಗೆ ಮಾನ್ಯತೆ:ಸಿಎಂ ಬೊಮ್ಮಾಯಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ ಸಮಯ ಕೇಳಿದ್ದೇನೆ. ಅವರಿಗೆ ವೈಯಕ್ತಿಕ ಕೆಲಸವಿರುವ ಹಿನ್ನೆಲೆ ಮುಂದಿನ ವಾರ ಭೇಟಿಯಾಗಲು ತಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಸಚಿವ ಸಂಪುಟದಲ್ಲಿ ಆನಂದ್ ಸಿಂಗ್ ಬಿಟ್ಟರೆ ಬೇರೆ ಯಾರಿಗೂ ಅಸಮಾಧಾನವಿಲ್ಲ. ಬೇರೆ ಖಾತೆ ನೀಡುವಂತೆ ಸಚಿವರು ಒತ್ತಡ ಹೇರುತ್ತಿಲ್ಲ. ಸಚಿವ ಆನಂದ್ ಸಿಂಗ್ ಕರೆದು ಮಾತನಾಡಿದ್ದೇನೆ. ಈಗ ಕೊಟ್ಟಿರುವ ಖಾತೆಯಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಅದರಂತೆ ಸಿಂಗ್ ಅಧಿಕಾರ ಸ್ವೀಕರಿಸಿ ಕೆಲಸ ಆರಂಭಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಸಚಿವ ಸಂಪುಟ ರಚನೆ ಬಳಿಕ ವರಿಷ್ಠರನ್ನು ಭೇಟಿ ಮಾಡುತ್ತಿದ್ದೇನೆ. ರಾಜ್ಯದ ವಿದ್ಯಮಾನಗಳ ಬಗ್ಗೆ ವರಿಷ್ಠರ ಜೊತೆ ಚರ್ಚಿಸುತ್ತೇನೆ. 4 ಸಚಿವ ಸ್ಥಾನಗಳ ಭರ್ತಿ ಬಗ್ಗೆ ಈಗಲೇ ಹೇಳಲು ಅಗುವುದಿಲ್ಲ. ಎಲ್ಲ ನಾಯಕರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಸಚಿವರ ಭೇಟಿ..:
ಬುಧವಾರ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಕೃಷಿ ಸಚಿವ ತೋಮರ್ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ತೋಮರ್ ಜೊತೆಗೆ ಮಾತುಕತೆ ವೇಳೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಕಾರಜೋಳ ಉಪಸ್ಥಿತರಿದ್ದರು. ಬಳಿಕ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಭೇಟಿಯಾಗಿ, ಮಹದಾಯಿ, ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ, ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ದೆ