ಮಂಡ್ಯದಲ್ಲಿ 9 ವರ್ಷದ ವ್ಯಕ್ತಿಯಿಂದ ಅತ್ಯಾಚಾರ : ಪೊಲೀಸರಿಂದ ಬಂಧನ

ಮಂಡ್ಯದಲ್ಲಿ 9 ವರ್ಷದ ವ್ಯಕ್ತಿಯಿಂದ ಅತ್ಯಾಚಾರ : ಪೊಲೀಸರಿಂದ ಬಂಧನ

ಮದ್ದೂರು : ತಾಲೂಕಿನ ಚಂದಳ್ಳಿದೊಡ್ಡಿ ಗ್ರಾಮದಲ್ಲಿ ವ್ಯಕ್ತಿಯೊರ್ವ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಆ.17 ರಂದು ನಡೆದಿದೆ. ಅತ್ಯಾಚಾರ ಎಸಗಿದಂತ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಗ್ರಾಮದ ಶಿವಲಿಂಗಯ್ಯ (62) ಎಂಬ ವ್ಯಕ್ತಿಯೇ 9 ವರ್ಷದ ಬಾಲಕಿಗೆ ತಿಂಡಿ ನೀಡುವುದಾಗಿ ಪುಸಲಾಯಿಸಿ ಬಾಲಕಿಯನ್ನು ಸಂಬಂಧಿಕರ ಮನೆಯ ಸಮೀಪ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಚಾರಕ್ಕೆ ವಿಫಲ ಯತ್ನ ನಡೆಸಿದ್ದಾನೆ ಎಂದು ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ.

ಬಾಲಕಿಗೆ ಪಟ್ಟಣದ ಶ್ರೀ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಶಿವಲಿಂಗಯ್ಯ ಅವರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.