ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಹುಟ್ಟಿಕೊಂಡಿದ್ದು ಯಾವಾಗಾ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 1956ರಲ್ಲಿ ಕನ್ನಡಿಗರು ಹೆಚ್ಚಾಗಿದ್ದ ಭಾಗಗಳನ್ನು ಸೇರಿಸಿ ಕರ್ನಾಟಕ(ಆಗಿನ ಮೈಸೂರು) ರಾಜ್ಯ ಸ್ಥಾಪಿಸಲಾಯಿತು. ಆದರೆ ನೆರ ರಾಜ್ಯಗಳು ಇದಕ್ಕೆ ಸಿದ್ಧವಿರದ ಕಾರಣ ಕೆಲವು ಪ್ರದೇಶಗಳು ಅಲ್ಲಿಯೇ ಉಳಿದವು. ಅದರಂತೆ, ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲಿ ಉಳಿದವು. ಇಷ್ಟಕ್ಕೆ ಸುಮ್ಮನಾಗದ ಮಹಾರಾಷ್ಟ್ರ ಬೆಳಗಾವಿ, ಬೀದರ್, ಕಾರವಾರ ಜಿಲ್ಲೆಗಳು ತಮಗೆ ಸೇರಬೇಕೆಂಬ ಕೂಗೆಬ್ಬಿಸಿತು. ಅಂದಿನಿಂದ ಎರಡೂ ರಾಜ್ಯಗಳ ಮಧ್ಯೆ ಗಡಿವಿವಾದ ಹುಟ್ಟಿಕೊಂಡಿತು.