ಜೇಬು ಸುಡಲಿದೆ ತಿಂಡಿ: ಹೋಟೆಲ್ ಬಿಲ್ 5 ರೂ. ತುಟ್ಟಿ, ನಾಳೆಯೇ ಜಾರಿ

ಜೇಬು ಸುಡಲಿದೆ ತಿಂಡಿ: ಹೋಟೆಲ್ ಬಿಲ್ 5 ರೂ. ತುಟ್ಟಿ, ನಾಳೆಯೇ ಜಾರಿ

ವಾಣಿಜ್ಯ ಬಳಕೆಯ ಎಲ್ಪಿಜಿ ಮೇಲಿನ ದರ ಹೆಚ್ಚಳದಿಂದಾಗಿ ಕಾಫಿ, ತಿಂಡಿ, ಊಟದ ಬಿಲ್ ಏರಿಕೆಗೆ ಮುಂದಾಗಿದ್ದ ರಾಜ್ಯದ ಹೋಟೆಲ್​ಗಳು ಸೋಮ ವಾರದಿಂದಲೇ ಹೊಸ ದರವನ್ನು ಜಾರಿಗೆ ತರಲಿವೆ. ಹೋಟೆಲ್​ಗಳು ದರ ಹೆಚ್ಚಳಕ್ಕೆ ನಿರ್ಧರಿಸಿರುವ ಕುರಿತಂತೆ ವಿಜಯವಾಣಿ ನ.5ರಂದೇ ವರದಿ ಮಾಡಿತ್ತು.

ಇಡ್ಲಿ(2ಕ್ಕೆ), ರವೆ ಇಡ್ಲಿ, ಪೂರಿ, ಪೊಂಗಲ್, ಪಲಾವ್, ಟೊಮ್ಯಾಟೊ ಬಾತ್, ಮಸಾಲೆ ದೋಸೆ, ಈರುಳ್ಳಿ ದೋಸೆ, ಊಟ, ಅನ್ನ ಸಾಂಬಾರ್ ಹಾಗೂ ಫೈ›ಡ್ ರೈಸ್ ಸೇರಿ ಸೇರಿ ವಿವಿಧ ಬಗೆಯ ತಿಂಡಿಗಳ ಬೆಲೆ ಈಗಿರುವ ದರಕ್ಕಿಂತ 5 ರೂ. ಹೆಚ್ಚಿಸುವುದಾಗಿ ಕರ್ನಾಟಕ ರಾಜ್ಯ ಹೋಟೆಲ್​ಗಳ ಸಂಘ ಮಾಹಿತಿ ನೀಡಿದೆ. ಮಿನಿ ಕಾಫಿ ಸೇರಿ ಸಣ್ಣ ಪದಾರ್ಥಗಳ ಮೇಲೆ 1-2 ರೂ. ಹೆಚ್ಚಿಸಲಾಗುವುದು. ಕರೊನಾ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಊಟ ತಿಂಡಿಗಳ ಮೇಲೆ ದರ ಹೆಚ್ಚಿಸಲಾಗಿಲ್ಲ. ಈಗ ಎಲ್ಪಿಜಿ, ವಿದ್ಯುತ್ ಶುಲ್ಕ ಹೆಚ್ಚಳ ಮತ್ತು ಊಟ ತಯಾರಿಸುವ ಪರಿಣಿತ ಸಿಬ್ಬಂದಿ ವೇತನ ಏರಿಕೆಯಿಂದಾಗಿ ಅನಿವಾರ್ಯವಾಗಿ ಊಟ ತಿಂಡಿಗಳ ಮೇಲೆ ದರ ಹೆಚ್ಚಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ್ ಹೆಬ್ಬಾರ್ ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ 8 ಸಾವಿರ ಸೇರಿದಂತೆ ರಾಜ್ಯದಲ್ಲಿ ಅಂದಾಜು 40 ಸಾವಿರ ಹೋಟೆಲ್​ಗಳಿವೆ. ಕರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮ ನಿಧಾನವಾಗಿ ಚೇತರಿಕೆಯತ್ತ ಸಾಗುತ್ತಿದ್ದರೂ ಎಲ್ಪಿಜಿ ದರ ಏರಿಕೆಯಿಂದಾಗಿ ಮತ್ತಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಬೆಲೆ ಏರಿಕೆ ಮಾಡದಿದ್ದರೆ ಆರ್ಥಿಕ ನಷ್ಟ ಅನುಭವಿಸಿ ಹೋಟೆಲ್​ಗಳಿಗೆ ಬೀಗ ಹಾಕಬೇಕಾಗುತ್ತದೆ. ಹಾಗಾಗಿ, ಎಲ್ಲರ ಜತೆ ರ್ಚಚಿಸಿ ಊಟ ತಿಂಡಿಗಳ ಮೇಲೆ 5 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ಹೆಚ್ಚು ದರ ಏರಿಸಿದರೆ ಗ್ರಾಹಕರ ಬರುವ ಸಂಖ್ಯೆ ಕಡಿಮೆ ಆಗಬಹುದು. ಹಾಗಾಗಿ, ಸ್ವಲ್ಪ ಮಾತ್ರ ದರ ಹೆಚ್ಚಿಸಲಾಗುತ್ತಿದೆ ಎಂದು ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.

ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋ ರೆಂಟ್, ರೆಸಾರ್ಟ್, ಮನರಂಜನಾ ಪಾರ್ಕ್​ಗಳ ಪುನಶ್ಚೇತನಕ್ಕೆ ಸರ್ಕಾರ ಸ್ಪಂದಿಸಿದೆ. 2021-22ನೇ ಹಣಕಾಸು ವರ್ಷದಲ್ಲಿ ಈ ಉದ್ದಿಮೆಗಳಿಗೆ ಸಂಬಂಧಿಸಿದ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50 ರಿಯಾಯಿತಿ ಪ್ರಕಟಿಸಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಪ್ರಕಟಗೊಂಡಿದ್ದು, ಬೆಂಗಳೂರು ನಗರ(ಬಿಬಿಎಂಪಿ) ಹೊರತುಪಡಿಸಿ ಈ ಆದೇಶ ಹೊರಬಿದ್ದಿದೆ. ಬೆಂಗಳೂರಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಆದೇಶ ಪ್ರಕಟವಾಗಬೇಕಿದೆ.

ಸಂಕಷ್ಟಕ್ಕೆ ಸಿಲುಕಿದ ಉದ್ಯಮಕ್ಕೆ ನೆರವಾಗಬೇಕೆಂದು ಪ್ರವಾಸೋದ್ಯಮ ಇಲಾಖೆ ಸರ್ಕಾರಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಿತ್ತು. ಆಸ್ತಿ ತೆರಿಗೆ ಮನ್ನಾ ಮಾಡುವುದು, ಅಬಕಾರಿ ಪರವಾನಗಿ ಶುಲ್ಕ ಮುಂದೂಡಿಕೆ ಅಥವಾ ಮನ್ನಾ ಮಾಡುವುದು, ವಿದ್ಯುತ್ ಬಿಲ್ ರಿಯಾಯಿತಿ, ವಾಹನ ತ್ರೖೆಮಾಸಿಕ ರಸ್ತೆ ತೆರಿಗೆಯನ್ನು 6 ತಿಂಗಳ ವರೆಗೆ ಪಾವತಿಸುವುದರಿಂದ ವಿನಾಯಿತಿ

ನೀಡುವುದು, ಪ್ರವಾಸೋದ್ಯಮ ವಿಭಾಗಗಳಿಗೆ ಸಾಲದ ನೆರವು ನೀಡಬೇಕೆಂಬ ಕೋರಿಕೆ ಸಲ್ಲಿಕೆಯಾಗಿತ್ತು. ಇದೀಗ ಕೆಲವು ಷರತ್ತುಗಳನ್ನು ವಿಧಿಸಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್​ಗಳ ಮಾಲಿಕರು ಶೇ.50 ತೆರಿಗೆ ಪಾವತಿಸುವುದು ಹಾಗೂ ಶೇ.50ರಷ್ಟನ್ನು ರಿಯಾಯಿತಿ ನೀಡಲು ಅವಕಾಶ ನೀಡಲಾಗಿದೆ.

ಈ ರಿಯಾಯಿತಿ ಪಡೆಯುಲು ಇಚ್ಛಿಸುವವರು ಕೆಟಿಟಿಎಫ್ ಕಾಯ್ದೆ ಅನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೊಂದಾಯಿಸಬೇಕು (ಆನ್​ಲೈನ್ ಮೂಲಕ) ಜತೆಗೆ ರಿಯಾಯಿತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಕಂದಾಯ ನಿರೀಕ್ಷಕರು ಪರಿಶೀಲನೆ ನಡೆಸಿದ ಬಳಿಕ ಪ್ರಕ್ರಿಯೆ ನಡೆಯುವುದು. ಮೇಲ್ವಿಚಾರಣೆಗೆ ಅಧಿಕಾರಿಗಳ ತಂಡವನ್ನು ರಚಿಸಲಾಗುತ್ತಿದೆ.