ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್ ಕಡೆಯಿಂದ 2ನೇ ಚಾನ್ಸ್; ಸ್ಟಾರ್ ನಟಿಯ ಉತ್ತರ ಏನು?

ನಟಿ ಸಮಂತಾ ( Samantha) ಅವರಿಗೆ ಬಹುಭಾಷೆಯಲ್ಲಿ ಡಿಮ್ಯಾಂಡ್ ಇದೆ.
ಶಾರುಖ್ ಖಾನ್ ಮತ್ತು ಅಟ್ಲೀ ಜೊತೆಯಾಗಿ ಮಾಡುತ್ತಿರುವ ಚಿತ್ರದಲ್ಲಿ ನಾಯಕಿ ಆಗುವಂತೆ ಸಮಂತಾಗೆ ಕೆಲವು ತಿಂಗಳ ಹಿಂದೆಯೇ ಆಫರ್ ಬಂದಿತ್ತು. ಆದರೆ ನಾಗ ಚೈತನ್ಯ ಜೊತೆ ಮಗು ಪಡೆದುಕೊಂಡು, ಸಂಸಾರಕ್ಕೆ ಸಮಯ ನೀಡಬೇಕು ಎಂಬ ಕಾರಣದಿಂದ ಅವರು ಶಾರುಖ್ ಸಿನಿಮಾಗೆ ನೋ ಎಂದಿದ್ದರು. ನಂತರ ಆ ಚಾನ್ಸ್ ನಯನತಾರಾ ಪಾಲಾಗಿತ್ತು. ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ಅಟ್ಲೀ ಜೊತೆಗಿನ ಶಾರುಖ್ ಸಿನಿಮಾದ ಕೆಲಸಗಳು ವಿಳಂಬ ಆಗತೊಡಗಿದವು. ಹಾಗಾಗಿ ನಯನತಾರಾ ಕೂಡ ಆ ಪ್ರಾಜೆಕ್ಟ್ನಿಂದ ಹೊರನಡೆಯುವ ನಿರ್ಧಾರ ತೆಗೆದುಕೊಂಡರು ಎನ್ನುತ್ತಿವೆ ಮೂಲಗಳು.
ಚಿತ್ರತಂಡದಿಂದ ನಯನತಾರಾ ಹೊರನಡೆಯುವ ತೀರ್ಮಾನ ತೆಗೆದುಕೊಂಡ ಬಳಿಕ ನಿರ್ಮಾಪಕರು ಮತ್ತೆ ಬಂದಿದ್ದು ಸಮಂತಾ ಬಳಿಗೆ. ವಿಚ್ಛೇದನ ಪಡೆದುಕೊಂಡು ಅಕ್ಕಿನೇನಿ ಕುಟುಂಬದಿಂದ ಬೇರ್ಪಟ್ಟಿರುವ ಅವರು ಈಗಲಾದಲೂ ಈ ಸಿನಿಮಾ ಒಪ್ಪಿಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ಎರಡನೇ ಬಾರಿಗೂ ಅವರು ಶಾರುಖ್ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈಗ ಆರ್ಯನ್ ಖಾನ್ಗೆ ಜಾಮೀನು ಸಿಕ್ಕಿದ್ದು, ಶಾರುಖ್ ಮತ್ತೆ ಚಿತ್ರೀಕರಣದತ್ತ ಗಮನ ಹರಿಸಲು ಸಜ್ಜಾಗಿದ್ದಾರೆ. ಹಾಗಾಗಿ ಮತ್ತೆ ನಯನತಾರಾ ಅವರನ್ನೇ ಆಯ್ಕೆ ಮಾಡಿಕೊಂಡು ಶೂಟಿಂಗ್ ಮುಂದುವರಿಸಲು ಚಿತ್ರತಂಡ ನಿರ್ಧರಿಸಿದೆ ಎಂಬುದು ಸದ್ಯ ಕೇಳಿಬರುತ್ತಿರುವ ಗಾಸಿಪ್.
ಇದನ್ನೂ ಓದಿ:
ಒಂದು ಸಿನಿಮಾಗೆ ಸಮಂತಾ ಪಡೆಯುವ ಸಂಭಾವನೆ ಇಷ್ಟೊಂದಾ; ಅಚ್ಚರಿ ಹೊರ ಹಾಕಿದ ಫ್ಯಾನ್ಸ್
ವಿದೇಶಿ ಮಾಧ್ಯಮಗಳಿಂದ ಬಿಗ್ ಪ್ಲ್ಯಾನ್: ಮಗನ ಡ್ರಗ್ಸ್ ಕೇಸ್ ಹಿಂದಿನ ರಹಸ್ಯ ಬಿಚ್ಚಿಡ್ತಾರಾ ಶಾರುಖ್?