2ನೇ ಮದುವೆಯಾಗಿ ಕರಾಚಿಯಲ್ಲಿ ಭೂಗತ ಪಾತಕಿ ʻದಾವೂದ್ ಇಬ್ರಾಹಿಂʼ ವಾಸ: ಸಹೋದರಿಯ ಪುತ್ರನಿಂದ ಮಾಹಿತಿ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಎರಡನೇ ಮದುವೆಯಾಗಿ ಪಾಕಿಸ್ತಾನದ ಕರಾಚಿಯ ಅಬ್ದುಲ್ಲಾ ಗಾಜಿ ಬಾಬಾ ದರ್ಗಾ ಬಳಿಯ ರಕ್ಷಣಾ ಪ್ರದೇಶದಲ್ಲಿ ನೆಲೆಸಿದ್ದಾನೆ ಎಂದು ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಅಲಿಶಾ ಇಬ್ರಾಹಿಂ ಪರ್ಕರ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಬಾಯ್ಬಿಟ್ಟಿದ್ದಾನೆ.
ಎನ್‌ಐಎ ನಡೆಸಿದ ವಿಚಾರಣೆ ವೇಳೆ ದಾವೂದ್‌ನ ಮೃತ ಸಹೋದರಿ ಹಸೀನಾ ಪರ್ಕರ್ ಅವರ ಪುತ್ರ ಅಲಿಶಾ ಇಬ್ರಾಹಿಂ ಪಾರ್ಕರ್ ಬಗ್ಗೆ ಮಾಹಿತಿ ನೀಡಿದ್ದಾನೆ.
ʻದಾವೂದ್ ಇಬ್ರಾಹಿಂ ತನ್ನ ಮೊದಲ ಪತ್ನಿ ಮೆಹಜಬೀನ್ ಶೇಖ್‌ಗೆ ಇನ್ನೂ ವಿಚ್ಛೇದನ ನೀಡಿಲ್ಲ. ಆದರೂ, 2ನೇ ಮದುವೆಯಾಗಿದ್ದಾನೆ. ಎರಡನೇ ಪತ್ನಿ ಪಠಾಣ್ ಮೂಲದವರುʼ ಎಂದು ಅಲಿಶಾ ಬಹಿರಂಗಪಡಿಸಿದ್ದಾನೆ.
ತನಿಖೆಯಲ್ಲಿ, ದಾವೂದ್ ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ತನ್ನ ವಿಳಾಸವನ್ನು ಬದಲಾಯಿಸಿದ್ದಾನೆ ಮತ್ತು ಪ್ರಸ್ತುತ ಪಾಕಿಸ್ತಾನದ ರಕ್ಷಣಾ ಸಚಿವಾಲಯಕ್ಕೆ ಸೇರಿದ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂಬ ಸುಳಿವು ಏಜೆನ್ಸಿಗಳಿಗೆ ಸಿಕ್ಕಿದೆ.