ಭಾಷಣ ಕೇಳುವಾಗ ಬೆಕ್ಕಿನ ಕಾಳಜಿ ತೋರಿದ ವ್ಯಕ್ತಿಗೆ ನೆಟ್ಟಿಗರು ಫಿದಾ

ಭಾಷಣ ಕೇಳುವಾಗ ಬೆಕ್ಕಿನ ಕಾಳಜಿ ತೋರಿದ ವ್ಯಕ್ತಿಗೆ ನೆಟ್ಟಿಗರು ಫಿದಾ

ಪ್ರಾಣಿ ಪ್ರಿಯರಾದ ಕೆಲವು ಜನರಿದ್ದಾರೆ, ಕೆಲವರನ್ನು ಪ್ರಾಣಿಗಳೇ ಬಿಡುವುದಿಲ್ಲ. ಅಂಥ ವಿಡಿಯೋ ಒಂದು ಈಗ ವೈರಲ್​ ಆಗಿದೆ. ವ್ಯಕ್ತಿಯೊಬ್ಬರು ಸಭೆಯಲ್ಲಿ ಅಧಿಕಾರಿಯ ಮಾತು ಕೇಳುವಾಗ ನಿಂತುಕೊಂಡಿದ್ದು, ಆತನ ಕಾಲ ಕೆಳಗೆ ಇರುವ ಬೆಕ್ಕಿನ ಹೊಟ್ಟೆ ಉಜ್ಜುವ ದೃಶ್ಯ ಇದಾಗಿದೆ.

ಆನ್‌ಲೈನ್‌ನಲ್ಲಿ ಈ ವಿಡಿಯೋ ಹುಚ್ಚುಚ್ಚಾಗಿ ವೈರಲ್ ಆಗಿದೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಮಿಯೋಂಕ್ ಎಂಬ ಪುಟವು ಹಂಚಿಕೊಂಡಿದೆ.

ಟ್ವಿಟರ್​ನಲ್ಲಿ ವೈರಲ್​ ಆಗಿರುವ ಈ 15 ಸೆಕೆಂಡುಗಳ ಕ್ಲಿಪ್‌ನಲ್ಲಿ, ಸಭೆಯೊಂದರಲ್ಲಿ ಹಲವು ವ್ಯಕ್ತಿಗಳ ಭಾಷಣ ಆಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿಯ ಕಾಲ ಕೆಳಗೆ ಬೆಕ್ಕು ಇದೆ. ಅದು ಈತನನ್ನು ಮುದ್ದಿಸುತ್ತಿದೆ. ಈತ ಕಾಲಿನಲ್ಲಿ ಅದನ್ನು ಉಜ್ಜುತ್ತಿರುವ ವಿಡಿಯೋ ವೈರಲ್ ಆಗಿದೆ.

ಬೆಕ್ಕು ನಿಸ್ಸಂಶಯವಾಗಿ ಮುದ್ದು ಪ್ರೀತಿ ತೋರುವುದನ್ನು ಕಾಣಬಹುದು. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಪ್ರಾಣಿಗಳ ಪ್ರೀತಿಗೆ ಅವುಗಳೆ ಸಾಕ್ಷಿ ಎಂದು ಹಲವರು ಬರೆದುಕೊಂಡಿದ್ದಾರೆ.