ಎಂಡಿಎಂಎ ಸಾಗಾಟ: ಓರ್ವ ಸೆರೆ

ಕಾಸರಗೋಡು, ಅ.೩- ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಪಡನ್ನಕಾಡಿನ ರಿಯಾಝ್ (೨೭) ಬಂಧಿತ ಆರೋಪಿ. ಬಂಧಿತನಿಂದ ೭೫ ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಈತ ಜಿಲ್ಲೆಗೆ ಮಾದಕ ವಸ್ತು ಸಾಗಾಟದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.