ಬಜೆಟ್‌ ಗಾತ್ರ, ವಲಯವಾರು ಹಣ ಹಂಚಿಕೆ ಎಷ್ಟಿದೆ ತಿಳಿಯಿರಿ

ಬಜೆಟ್‌ ಗಾತ್ರ, ವಲಯವಾರು ಹಣ ಹಂಚಿಕೆ ಎಷ್ಟಿದೆ ತಿಳಿಯಿರಿ

ರ್ನಾಟಕ ರಾಜ್ಯ ಮುಖ್ಯಮಂತ್ರಿ, ಹಣಕಾಸು ಸಚಿವ ಬಸವರಾಜ ಬೊಮ್ಮಾಯಿ 2023-24ನೇ ಹಣಕಾಸು ವರ್ಷದ ಬಜೆಟ್ ಮಂಡನೆಯನ್ನು ಫೆಬ್ರವರಿ 17ರಂದು ಮಾಡಿದ್ದಾರೆ. ಈ ಬಜೆಟ್‌ ಮಂಡನೆ ವೇಳೆ ಬೇರೆ ಬೇರೆ ವಲಯಗಳಿಗೆ ಹೊಸ ಘೋಷಣೆಗಳನ್ನು ಘೋಷಣೆ ಮಾಡಿದ್ದಾರೆ. ಹಾಗೆಯೇ ಕೆಲವು ಘೋಷಣೆಗಳನ್ನು ವಿಸ್ತರಣೆ ಮಾಡಿದ್ದಾರೆ

ರೈತರಿಗೆ, ಮೀನುಗಾರರಿಗೆ ಯೋಜನೆಗಳು, ಎಸ್​ಸಿ, ಎಸ್​​ಟಿ ಸಮುದಾಯಕ್ಕೆ ಯೋಜನೆ, ಬೀದಿಬದಿ ವ್ಯಾಪಾರಿಗಳಿಗೆ, ಆಶಾಕಾರ್ಯಕರ್ತೆಯರಿಗೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಆಶಾಕಾರ್ಯಕರ್ತೆಯ ಗೌರವ ಧನ 1000 ರೂಪಾಯಿ ಏರಿಸುವ ಘೋಷಣೆಯನ್ನು ಹಣಕಾಸು ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಮಾಡಿದ್ದಾರೆ

ಎಲ್ಲ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿ ಆರಂಭ, ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಮಕ್ಕಳ ಬಸ್​ ಯೋಜನೆ ಆರಂಭದ ಘೋಷಣೆಯನ್ನು ಕೂಡಾ ಮುಖ್ಯಮಂತ್ರಿ ಮಾಡಿದ್ದಾರೆ. ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಹಾಗಾದರೆ 2023-24ನೇ ಸಾಲಿನ ಕರ್ನಾಟಕ ಬಜೆಟ್ ಗಾತ್ರ, ವಲಯವಾರು ಹಂಚಿಕೆಯ ಬಗ್ಗೆ ತಿಳಿಯೋಣ ಮುಂದೆ ಓದಿ....

ಕರ್ನಾಟಕ ಬಜೆಟ್ ಗಾತ್ರ, ವಲಯವಾರು ಹಂಚಿಕೆ

2023-24ನೇ ಸಾಲಿನ ಕರ್ನಾಟಕ ಬಜೆಟ್ ಒಟ್ಟು ಗಾತ್ರ 309182 ಕೋಟಿ ರೂಪಾಯಿ ಆಗಿದ್ದು ಇದು ಸರ್‌ಪ್ಲಸ್ ಬಜೆಟ್ ಆಗಿದೆ. 2022-23ನೇ ಸಾಲಿನ ರಾಜ್ಯ ಬಜೆಟ್​ ಗಾತ್ರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯ ಕರ್ನಾಟಕ ಬಜೆಟ್‌ 3 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ನಿರೀಕ್ಷೆಯಿತ್ತು.

- ಶಿಕ್ಷಣ - 37,960 ಕೋಟಿ ರೂಪಾಯಿ

- ಜಲಸಂಪನ್ಮೂಲ - 22,854 ಕೋಟಿ ರೂಪಾಯಿ

- ಗ್ರಾಮೀಣಾಭಿವೃದ್ಧಿ - 20,494 ಕೋಟಿ ರೂಪಾಯಿ

- ನಗರಾಭಿವೃದ್ಧಿ - 17,938 ಕೋಟಿ ರೂಪಾಯಿ

- ಕಂದಾಯ - 15,943 ಕೋಟಿ ರೂಪಾಯಿ

- ಆರೋಗ್ಯ ವಲಯ - 15,151 ಕೋಟಿ ರೂಪಾಯಿ

- ಒಳಾಡಳಿತ, ಸಾರಿಗೆ - 14,509 ಕೋಟಿ ರೂಪಾಯಿ

- ಇಂಧನ - 13,803 ಕೋಟಿ ರೂಪಾಯಿ

ಸಮಾಜ ಕಲ್ಯಾಣ - 11,163 ಕೋಟಿ ರೂಪಾಯಿ

- ಲೋಕೋಪಯೋಗಿ - 10,741 ಕೋಟಿ ರೂಪಾಯಿ

- ಕೃಷಿ, ತೋಟಗಾರಿಕೆ - 9,456 ಕೋಟಿ ರೂಪಾಯಿ

- ಮಹಿಳಾ, ಮಕ್ಕಳ ಕಲ್ಯಾಣ - 5,676 ಕೋಟಿ ರೂಪಾಯಿ

- ಆಹಾರ ವಲಯ - 4,600 ಕೋಟಿ ರೂಪಾಯಿ

- ವಸತಿ - 3,787 ಕೋಟಿ ರೂಪಾಯಿ

- ಇತರೆ - 1,16,968 ಕೋಟಿ ರೂಪಾಯಿ