ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್‌ಗಳು

2022ರ ವರ್ಷದ ಮುಕ್ತಾಯಕ್ಕೆ ಇನ್ನು ಎರಡೇ ವಾರಗಳ ಬಾಕಿ ಇದೆ. ಈ ದಿನಗಳಲ್ಲಿ ಕೆಲವು ತಂಡಗಳು ಇನ್ನೂ ಪ್ರಮುಖ ಪಂದ್ಯಗಳನ್ನು ಆಡಬೇಕಿದೆ. ಹೆಚ್ಚಿನ ತಂಡಗಳು ಸದ್ಯ ಟೆಸ್ಟ್ ಕ್ರಿಕೆಟ್ ಸರಣಿಗಳನ್ನು ಆಡುತ್ತಿವೆ.
ಹೀಗಾಗಿ ಗೆಲುವು-ಸೋಲು, ದಾಖಲೆಗಳನ್ನು ನೋಡಬಹುದಾಗಿದೆ.
2022ರಲ್ಲಿ ಇದುವರೆಗಿನ ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ.
ಬಾಬರ್ ಅಜಂ- ಪಾಕಿಸ್ತಾನ- 2291 ರನ್
ವರ್ಷಾಂತ್ಯಕ್ಕೆ ಇನ್ನೂ ಹದಿನೈದು ದಿನಗಳು ಬಾಕಿ ಇರುವಾಗ ಎಲ್ಲಾ ಸಾಧ್ಯತೆಗಳನುಗುಣವಾಗಿ, ಪಾಕಿಸ್ತಾನದ ನಾಯಕ ಬಾಬರ್ ಅಜಂ 2022ರಲ್ಲಿ ಈ ವರ್ಷ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಗ್ರ ರನ್-ಸ್ಕೋರರ್ ಆಗಿ ಈ ವರ್ಷ ಮುಗಿಸುವುದು ಖಚಿತವಾಗಿದೆ. ಏಕೆಂದರೆ ತಮ್ಮ ಪ್ರತಿಸ್ಪರ್ಧಿಗಿಂತ ಬರೋಬ್ಬರಿ 500 ರನ್‌ಗಳ ಅಂತರದಲ್ಲಿ ಮುಂದಿದ್ದಾರೆ.
ಬಾಬರ್ ಅಜಂ ಈ ವರ್ಷ ಮೂರು ಸ್ವರೂಪಗಳ 48 ಇನ್ನಿಂಗ್ಸ್‌ಗಳಲ್ಲಿ 52ರ ಸರಾಸರಿಯಲ್ಲಿ 2291 ರನ್ ಗಳಿಸಿದ್ದಾರೆ. ಈ ವರ್ಷ 15 ಅರ್ಧ ಶತಕಗಳೊಂದಿಗೆ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಶತಕಗಳು ಮತ್ತು ಇಂಗ್ಲೆಂಡ್ ವಿರುದ್ಧ ಒಂದು ಟಿ20 ಶತಕ ಬಾರಿಸಿದ್ದಾರೆ.