ಗೀ ಗೀ ಪದ ಹಾಡಿ ವಿನೂತನ ಪ್ರತಿಭಟನೆ

ಗೀ ಗೀ ಪದ ಹಾಡುವ ಮೂಲಕವೇ ಬೇಡಿಕೆಗೆ ಆಗ್ರಹಿಸಿ. ಕರ್ನಾಟಕ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ, ಕಲಾವಿದರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ಜಿಲ್ಲಾಧಿಕಾರಿ ಎದುರು ಗೀ ಗೀ ಪದದ ಮೂಲಕ ಜಮಾಯಿಸಿದ ಕಲಾವಿದರು ಗೀ ಗೀ ಪದದ ಹಾಡಿನ ಮೂಲಕ ಬೇಡಿಕೆ ವಿಷಯವನ್ನು ಪ್ರಸ್ತಾಪದರು.ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗಾಗಿ ವಿನೂತವಾಗಿ ಪ್ರತಿಭಟನೆ ನಡೆಸಿದ್ರು. ಬೆಳಗಾವಿಗೆ ಹೋಗಿರುವ ಕಲಾವಿದರ ಕಛೇರಿಯನ್ನು ಧಾರವಾಡಕ್ಕೆ ನೀಡುವಂತೆ ಆಗ್ರಹಿಸಿ, ಹಾಡಿ‌ನ ಮೂಲಕ ಪ್ರತಿಭಟನೆ ನಡೆಸಿದ್ರು. ಇನ್ನು ಬೆಳಗಾವಿಗೆ ಹೋಗಿರುವ ಕಚೇರಿ ನಮ್ಮ ಧಾರವಾಡಕ್ಕೆ ಇರಲಿ ಎಂದು ಕಲಾವಿದರು ಹಾಡಿನಲ್ಲಿಯೇ ಸರ್ಕಾರಕ್ಕೆ ಒತ್ತಾಯಿಸಿದರು.