'IPL' ಆರಂಭಕ್ಕೂ ಮುನ್ನ ಚೆನ್ನೈ ತಂಡಕ್ಕೆ ಬಿಗ್ ಶಾಕ್ ; ಗುಜರಾತ್ ವಿರುದ್ಧದ ಮೊದಲ ಪಂದ್ಯದಿಂದ 'ಧೋನಿ' ಔಟ್
ನವದೆಹಲಿ: ಐಪಿಎಲ್ 2023ರ ಋತುವಿನ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ, ಚೆನ್ನೈ ಸೂಪರ್ ಕಿಂಗ್ಸ್ ಗುರುವಾರ ಭಾರಿ ಹೊಡೆತವನ್ನ ಅನುಭವಿಸಿದೆ. ನಾಯಕ ಎಂಎಸ್ ಧೋನಿ ಶುಕ್ರವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ, ಎಂಎಸ್ ಧೋನಿ ಅವರ ಎಡ ಮೊಣಕಾಲಿಗೆ ಗಾಯವಾಗಿದ್ದು, ಟೀಮ್ ಮ್ಯಾನೇಜ್ಮೆಂಟ್ ಅವ್ರನ್ನ ತಂಡದಲ್ಲಿ ಸೇರಿಸಲು ಬಯಸಿಲ್ಲ. ಹಾಗಾಗಿ ಕ್ಯಾಪ್ಟನ್ ಕೂಲ್ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.