ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್‌ ಸ್ಟೋಕ್ಸ್ ಟೀಕೆ

ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್‌ ಸ್ಟೋಕ್ಸ್ ಟೀಕೆ

ಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಸೋಲನುಭವಿಸಿದೆ. ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.

ಇಂಗ್ಲೆಂಡ್ ಕೊನೆಯದಾಗಿ ಆಡಿರುವ 9 ಏಕದಿನ ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಬೆನ್‌ ಸ್ಟೋಕ್ಸ್ ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ನ ಕಳಪೆ ಪ್ರದರ್ಶನಕ್ಕೆ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯೇ ಕಾರಣ ಎಂದು ದೂರಿದ್ದಾರೆ. ಇಂಗ್ಲೆಂಡ್ ಸತತವಾಗಿ ಕ್ರಿಕೆಟ್ ಪಂದ್ಯಗಳನ್ನಾಡುತ್ತಿರುವುದು ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ನ ಆಟಗಾರರ ಫಾರ್ಮ್ ಕುಸಿತವಾಗಲು ಕಡಿಮೆ ಸಮಯದಲ್ಲಿ ಹೆಚ್ಚು ಪಂದ್ಯಗಳನ್ನಾಡುತ್ತಿರುವುದು ಕಾರಣ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ, ಅನೇಕ ಇಂಗ್ಲೆಂಡ್ ಅಭಿಮಾನಿಗಳು ಇಂಗ್ಲೆಂಡ್ ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೋಕ್ಷವಾಗಿ ಟೀಕೆ ಮಾಡಿದ ಸ್ಟೋಕ್ಸ್

ಇಂಗ್ಲೆಂಡ್‌ನ ಇತ್ತೀಚಿನ ಪ್ರದರ್ಶನದ ಬಗ್ಗೆ ವಿಸ್ಡನ್ ಕ್ರಿಕೆಟ್‌ ಟ್ವಿಟರ್ ಖಾತೆಯಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಇಂಗ್ಲೆಂಡ್ ಆಡಿರುವ ಕಳೆದ 9 ಪಂದ್ಯಗಳಲ್ಲಿ 7 ಬಾರಿ ಸೋಲನುಭವಿಸಿದೆ, ಇಂಗ್ಲೆಂಡ್ ತಂಡದ ದೊಡ್ಡ ಸಮಸ್ಯೆ ಏನು ಅಂದು ಪ್ರಶ್ನೆ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೆನ್‌ಸ್ಟೋಕ್ಸ್, ಇದಕ್ಕೆ ಕಾರಣ "S ಅಕ್ಷರದಿಂದ ಆರಂಭವಾಗಿ E

ಅಕ್ಷರದಿಂದ ಕೊನೆಯಾಗುತ್ತದೆ ಮಧ್ಯದಲ್ಲಿ chedul ಇದೆ" ಎಂದು ಹೇಳುವ ಮೂಲಕ ವೇಳಾಪಟ್ಟಿ (Shedule) ಕಾರಣ ಎಂದು ಕುಟುಕಿದ್ದಾರೆ.

ಸ್ಟೋಕ್ಸ್ ವಿದಾಯ ಹೇಳಿದ್ಯಾಕೆ?

ಬಿಡುವಿಲ್ಲದ ವೇಳಾಪಟ್ಟಿಯಿಂದ ಬೇಸತ್ತು ಬೆನ್‌ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ಎಲ್ಲಾ ತಂಡಗಳು ಏಕದಿನ ವಿಶ್ವಕಪ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿವೆ.

ದಕ್ಷಿಣ ಆಫ್ರಿಕಾ ಇಂಗ್ಲೆಂಡ್‌ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲು ಅವಕಾಶ ಹೊಂದಿರುತ್ತದೆ. ಇಲ್ಲವಾದಲ್ಲಿ ಅರ್ಹತಾ ಸುತ್ತಿನ ತಂಡಗಳ ಜೊತೆ ಸ್ಪರ್ಧಿಸಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾಗುತ್ತದೆ.