ತಮಿಳುನಾಡು: ಕೋರ್ಟ್‌ ಆವರಣದಲ್ಲೇ ಪತ್ನಿ ಮುಖದ ಮೇಲೆ ಆಯಸಿಡ್‌ ಎಸೆದ ಪತಿ

ತಮಿಳುನಾಡು: ಕೋರ್ಟ್‌ ಆವರಣದಲ್ಲೇ ಪತ್ನಿ ಮುಖದ ಮೇಲೆ ಆಯಸಿಡ್‌ ಎಸೆದ ಪತಿ

ಚೆನ್ನೈ: ಕೋರ್ಟಿನ ಆವರಣದಲ್ಲೇ ಪತ್ನಿಯ ಮುಖದ ಮೇಲೆ ಪತಿಯೊಬ್ಬ ಆಯಸಿಡ್‌ ಎಸೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರುನಲ್ಲಿ ಗುರುವಾರ (ಮಾ.23 ರಂದು) ನಡೆದಿದೆ.

ಚಿತ್ರಾ ಎನ್ನುವ ಮಹಿಳೆ ತನ್ನ ಪತಿಯ ಮೇಲೆ ದೂರು ದಾಖಲಿಸಿದ್ದು, ಪತಿ ವಿರುದ್ಧ ಮಹಿಳೆ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಕೋರ್ಟ್ ಮುಂದಾದಾಗ ಆಯಸಿಡ್‌ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.

ಪತ್ನಿ ತನ್ನ ವಿರುದ್ದ ದೂರು ದಾಖಲು ಮಾಡಿದ್ದಾಳೆ. ಇದರ ವಿಚಾರಣೆಗೆ ಬಂದ ಪತಿ ಶಿವಕುಮಾರ್ ನೀರಿನ ಬಾಟಲಿಯಲ್ಲಿ ಆಯಸಿಡ್‌ ತುಂಬಿಸಿಕೊಂಡು ಕೋರ್ಟಿನ ಆವರಣಕ್ಕೆ ತಂದಿದ್ದಾನೆ. ಇನ್ನೇನು ವಿಚಾರಣೆ ಆರಂಭಗೊಳ್ಳಬೇಕು ಅಷ್ಟು ಹೊತ್ತಿಗೆ ಪತಿ ಶಿವಕುಮಾರ್‌ ಪತ್ನಿ ಚಿತ್ರ ಮುಖದ ಮೇಲೆ ಆಯಸಿಡ್‌ ಎಸೆದಿದ್ದಾನೆ.

ಕೂಡಲೇ ಅಲ್ಲಿದ್ದ ಜನರು ಆರೋಪಿ ಶಿವಕುಮಾರ್‌ ನನ್ನು ಹಿಡಿದು ಥಳಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಆರೋಪಿಯನ್ನು ಎಳೆದು ಈಚೆಗೆ ತಂದಿದ್ದಾರೆ ಎಂದು ವರದಿ ತಿಳಿಸಿದೆ.