ಆಲ್ ದಿ ಬೆಸ್ಟ್ ಇಂಡಿಯಾ, ವಿಶ್ ಹೇಳಿದ ಧಾರವಾಡ ವಿದ್ಯಾರ್ಥಿಗಳು

ಟಿ-20 ವಲ್ಡ್೯ ಕಪ್ ಕ್ರಿಕೆಟ್ ಮ್ಯಾಚ್ ಗಳು ಆರಂಭಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಅದ್ರಲ್ಲೋ ಇವತ್ತು ಇಂಡಿಯಾ, ಪಾಕಿಸ್ತಾನ ವಲ್ಡ್೯ ಕಪ್ ನ ಹೈ ಓಲ್ಟೇಜ್ ಪಂದ್ಯ ಇಂದು ನಡೆಯುತ್ತಿದ್ದು. ಈ ಪೈಕಿ ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಗೆಲುವು ಸಾಧಿಸಲಿ ಎಂದು ಹಾರೈಕೆ ಜೊತೆಗೆ ದೇವರ ಮೊರೆ ಸಹಿತ ಹೋಗಿದ್ದಾರೆ. ಅದ್ರಂತೆ ಧಾರವಾಡ ಪವನ್ ಸ್ಕೂಲ್ ಕ್ರಿಕೆಟ್ ತರಬೇಡಿ ಪಡೆಯುವ ವಿದ್ಯಾರ್ಥಿಗಳು ಮತ್ತು ಕ್ರಿಕೆಟ್ ಕೊಚ್ ಗಳು ಭಾರತ ತಂಡ ಗೆಲ್ಲಲ್ಲಿ ಅಂತಾ ಭಾರತದ ಧ್ವಜ ಕೈಯಲ್ಲಿ ಹಿಡಿದು ಆಲ್ ದಿ ಬೆಸ್ಟ್ ಇಂಡಿಯಾ ಎಂದು ಶುಭ ಹಾರೈಸಿದ್ರು.