ಮಿನಿ ಒಲಂಪಿಕ್ ಶ್ರೀ ಬಾಲ-ಮಾರುತಿ ಜಿಮ್ನಾಸ್ಟಿಕ ಸಂಸ್ಥೆಯ ಮಕ್ಕಳ ಅಮೋಘ ಸಾಧನೆ

ಮಿನಿ ಒಲಂಪಿಕ್ ಶ್ರೀ ಬಾಲ-ಮಾರುತಿ ಜಿಮ್ನಾಸ್ಟಿಕ ಸಂಸ್ಥೆಯ ಮಕ್ಕಳ ಅಮೋಘ ಸಾಧನೆ
ಪೇಡಾ ನಗರಿ ಕೀರ್ತಿ ಪತಾಕೆ ಹಾರಿಸಿದ ಜಿಮ್ನಾಸ್ಟಿಕ ಮಕ್ಕಳು
ಮಿನಿ ಒಲಂಪಿಕನಲ್ಲಿ ಚಿನ್ನದ ಭೇಟೆಯಾಡಿದ ಧಾರವಾಡದ ಕ್ರೀಡಾಪಟುಗಳು
2022ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ 2ನೇ ಮಿನಿ ಒಲಿಂಪಿಕ್ಸ್ ಕ್ರೀಡೆಗಳಲ್ಲಿ
ಶ್ರೀ ಬಾಲ-ಮಾರುತಿ ಜಿಮ್ನಾಸ್ಟಿಕ ಸಂಸ್ಥೆಯ ಮಕ್ಕಳು ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ ಭಾಗವಹಿಸಿ 9ಚಿನ್ನ 6ಬೆಳ್ಳಿ 23ಕಂಚು ಒಟ್ಟು 38 ಪದಕಗಳನ್ನು ಪಡೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಅವಳಿ ನಗರ ಪಾಲಿಕೆ ಸದಸ್ಯ ಈರೇಶ್ ಅಂಚಟಗೇರಿ ಶ್ಲಾಘಿಸಿದ್ದಾರೆ
ಧಾರವಾಡದಲ್ಲಿ ಇಂದು ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಶ್ರೀ ಬಾಲ-ಮಾರುತಿ ಜಿಮ್ನಾಸ್ಟಿಕ ಸಂಸ್ಥೆಯ ಮಕ್ಕಳು ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿನ ಪ್ರದರ್ಶನದಿಂದ ಧಾರವಾಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಕಡಿಮೆ ಮೂಲ ಭೂತಗಳ ಸೌಲಭ್ಯಗಳನ್ನು ಹೊಂದಿದ್ದರೂ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸ್ಥೆಯ ಕೀಡಾಪಟುಗಳು ಸಾಧನೆ ಮಾಡಿದ್ದಾರೆ.
ಒಟ್ಟಾರೆ ತಂಡದ ಪ್ರದರ್ಶನ ಉತ್ತಮವಾಗಿದೆ ಎಂದರು.
ಸಂಸ್ಥೆಯ ಸದಸ್ಯರು ಹಾಗೂ ಪಾಲಿಕೆಯ ಸದಸ್ಯರಾದ ಶ್ರೀ
ಈರೇಶ ಅಂಚಟಗೇರಿ, ವಿಠ್ಠಲ ಮುರತ್ ಗುಡ್ಡೆ ,ಸುಕದ ಜೋಶಿ, ಶೆಖರ ಮಾನೆ, ಉಪಸ್ಥಿತರಿದ್ದರು