ಹಿಂದು ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಬಾಂಗ್ಲಾ ದೇಶದಲ್ಲಿ ಹಿಂದೂ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ, ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ಧಾರವಾಡದ ಕಲಾ ಭವನದಿಂದ, ಸ್ವಾಮಿ ವಿವೇಕಾನಂದ ಸಕ್೯ಲ್ ಮೂಲಕ ಜಿಲ್ಲಾಧಿಕಾರಿ ಕಛೇರಿವರೆಗೆ ರ್ಯಾಲಿ ನಡೆಸಿದ್ರು. ಇನ್ನು ಇಸ್ಕಾನ್ ದೇವಾಲಯಗಳು, ಅದರ ಸದಸ್ಯರು, ಪಕ್ಕದ ಹಿಂದು ದೇವಾಲಯಗಳು ಸೇರಿದಂತೆ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ಇತ್ತೀಚಿಗೆ ನಡೆದ ಹಿಂಸಾತ್ಮಕ ಘಟನೆಗಳ ಸರಣಿಯಿಂದ ಇಸ್ಕಾನ್ ಸಮುದಾಯ ಆಘಾತಕ್ಕೆ ಒಳಗಾಗಿದೆ. ಕೂಡಲೇ ಭಾರತ ಸರ್ಕಾರ ಮುಂದಾಗಿ ಬಾಂಗ್ಲಾದೇಶ ಸರ್ಕಾರಕ್ಕೆ, ಈ ರೀತಿಯ ದೌರ್ಜನ್ಯ ನಿಲ್ಲಿಸಬೇಕೆಂದು ಒತ್ತಾಯಿಸಿದ್ರು.