ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಏನೂ ಮಾತಾಡಿಲ್ಲ; ವಿಕಿಪಿಡಿಯಾದಲ್ಲಿ ಇರುವುದು ಹೇಳಿದ್ದಾರೆ: ರಾಮಲಿಂಗಾ ರೆಡ್ಡಿ ಸಮರ್ಥನೆ

ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಏನೂ ಮಾತಾಡಿಲ್ಲ; ವಿಕಿಪಿಡಿಯಾದಲ್ಲಿ ಇರುವುದು ಹೇಳಿದ್ದಾರೆ: ರಾಮಲಿಂಗಾ ರೆಡ್ಡಿ ಸಮರ್ಥನೆ

ಬೆಂಗಳೂರು: ಸತೀಶ್‌ ಜಾರಕಿಹೊಳಿ ಹಿಂದೂ ಧರ್ಮವನ್ನು ನಿಜಾವಾಗಿ ಪಾಲಿಸುತ್ತಾರೆ. ಆದರೆ ಇದನ್ನ ಬಿಜೆಪಿ ಅವರು ಚುನಾವಣೆಗೆ ಹಿಂದೂ ಧರ್ಮ ಬಳಸಿಕೊಳ್ಳುತ್ತಿದ್ದಾರೆ.ನಮಗೆ ಹಿಂದೂ ಧರ್ಮದ ಬಗ್ಗೆ ಗೌರವವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಏನೂ ಮಾತಾಡಿಲ್ಲ ವಿಕಿಪಿಡಿಯಾದಲ್ಲಿ ಇರುವುದನ್ನು ಹೇಳಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಸಮರ್ಥಿಸಿಕೊಂಡರು.ಮುಂದವರೆದು ನಾವು ಕಟ್ಟಿದಷ್ಟು ದೇವಸ್ಥಾನಗಳನ್ನು ಬಿಜೆಪಿಯವರು ಕಟ್ಟಿಲ್ಲ. ನಾವು ಅಧಿಕಾರದಲ್ಲಿದ್ದಾಗ ದೇವಸ್ಥಾನಗಳಿಗೆ ಹೆಚ್ಚು ಅನುದಾನವನ್ನು ಕೊಟ್ಟಿದ್ದೇವೆ. ಬಿಜೆಪಿಯವರು ಏನೂ ಕೊಡದೆ ಪ್ರಚಾರ ಪಡೆಯುತ್ತಾರೆ. ಬಿಜೆಪಿಯವರು ತಮಗೆ ಬೇಕಾದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.