ಮೂರನೇ ದಿನವು ವರುಣ ಆರ್ಭಟ ಜೋರಾಗಿದ್ದು
ಪೇಡಾ ನಗರಿ ಧಾರವಾಡದಲ್ಲಿ ಸತತ ಮೂರು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದು. ಬಿಟ್ಟು ಬಿಡದ ಹಾಗೆ ವರುಣ ಸುರಿಯುತ್ತಿದ್ದಾನೆ. ಈ ಅಕಾಲಿಕ ಮಳೆಯಿಂದ ಜಿಲ್ಲೆಯ ರೈತರಿಗೆ ಸಾಕಷ್ಟು ತೊಂದರೆ ನಷ್ಟ ಎದುರಾಗಿದೆ. ಸಾಕಷ್ಟು ಹಾನಿ ಸಂಭವಿಸಿದ್ರು ಕೂಡಾ ಮಳೆರಾಯನ ಚಲ್ಲಾಟ ಇನ್ನು ಮುಗಿದಿಲ್ಲ. ಈಗಾಗಲೇ ರೈತರು ಬೆಳದ ಬೆಳೆ ಕಳೆದುಕೊಂಡು ಪ್ರಾಣ ಸಂಕಟದಲ್ಲಿ ಸಿಲುಕಿದ್ದಾರೆ. ಇಂದು ಮುಂಜಾನೆಯಿಂದ ಬಿಟ್ಟು ಬಿಡದ ಹಾಗೆ ಮಳೆ ಅಬ್ಬರಿದುತ್ತದೆ. ಇನ್ನು ದಿನನಿತ್ಯ ಕೆಲಸಕ್ಕೆ ಹೋಗುವರಿಗೆ ವರುಣ ಅಡ್ಡ ಪಡೆಸಿದ್ದಾನೆ. ವಾಹನ ಸವಾರರು ಹರಸಾಹಸ ಪಟ್ಟು ನಿತ್ಯ ಕಾರ್ಯಕ್ಕೆ ಸಾಗುತ್ತಿದ್ದಾರೆ. ಓ ಮಳೆರಾಯ ನಿನ್ನ ಅಬ್ಬರ ನಿಲ್ಲಿಸು ಸಾಕು ಅಂತಾ ಜನರು ಮೂಡಗಳ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಮಳೆಯಿಂದ ತೊಂದರೆ ಆಗಿದ್ದು ಸಾಕು, ಇನ್ನು ಯಾವ ತೊಂದರೆ ನೀಡದಂತೆ ವರುಣ ತನ್ನ ಚೆಲ್ಲಾಟ ನಿಲ್ಲಿಸುತ್ತಾನ ಎಂಬುದು ಕಾದೂ ನೋಡಬೇಕಿದೆ.