ಹೋರಾಟಕ್ಕೆ ಇಳಿದ ಕಾನೂನು ವಿವಿಯ ವಿದ್ಯಾರ್ಥಿಗಳು: ಬೇಕೆ ಬೇಕು ನ್ಯಾಯಾ ಬೇಕು

ಹೋರಾಟಕ್ಕೆ ಇಳಿದ ಕಾನೂನು ವಿವಿಯ ವಿದ್ಯಾರ್ಥಿಗಳು: ಬೇಕೆ ಬೇಕು ನ್ಯಾಯಾ ಬೇಕು

ಹುಬ್ಬಳ್ಳಿ: ಕಾನೂನು ವಿಶ್ವ ವಿದ್ಯಾಲಯದಲ್ಲಿಯೇ ಕಾನೂನು ಪಾಲನೆಯಾಗ್ತಿಲ್ವಾ..? ಹೌದು. ಇತಂಹದ್ದೊಂದು ಪ್ರಶ್ನೆ ಇದೀಗ ಎದ್ದಿದೆ. ಯಾಕೆ ಅಂದರೆ ಕಾನೂನು ಪದವಿಧರ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡಬೇಕಾದ ವಿಶ್ವ ವಿದ್ಯಾಲವಯೇ ಇನ್ನೂ ತರಗತಿಗಳನ್ನು ಆರಂಭಿಸಿಲ್ಲ. ಹೀಗಾಗಿ 3 ವರ್ಷದ ಪದವಿಯನ್ನು ನಾಲ್ಕು ವರ್ಷ, ಐದು ವರ್ಷದ ಪದವಿಯನ್ನ ಆರು ವರ್ಷಗಳ‌ ಕಾಲ ಓದಬೇಕಾದ ಪರಿಸ್ಥಿತಿ ಸಾವಿರಾರು ವಿದ್ಯಾರ್ಥಿಗಳದ್ದಾಗಿದ್ದೆ. ವಿಶ್ವ ವಿದ್ಯಾಲಯ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ ಅಂತಾ ವಿದ್ಯಾರ್ಥಿಗಳು ಇದೀಗ ಹೋರಾಟಕ್ಕೆ‌ ಇಳಿದಿದ್ದಾರೆ.

ಬೇಕೇ ಬೇಕು... ನ್ಯಾಯ ಬೇಕು...ಅಂತಾ ಘೋಷಣೆ ಕೂಗುತ್ತಾ ಇರುವ ವಿದ್ಯಾರ್ಥಿಗಳು.. ನಮ್ಮ‌ಕೂಗು ಕೇಳಿ ನಿಮ್ಮ ತಪ್ಪು ತಿದ್ದಿಕೊಳ್ಳಿ ಅಂತಿರುವ ವಿದ್ಯಾರ್ಥಿನಿಯರು. ಕೂಡಲೇ ಶೈಕ್ಷಣಿಕ ವರ್ಷದ ತರಗತಿ ಶುರು ಮಾಡಿ ಅಂತಿರುವ ಕಾನೂನು ಪದವೀಧರರು. ಹೌದು..ರಾಜ್ಯ ಕಾನೂನು ವಿವಿಯ ಧೋರಣೆಯಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಯಾಕ ಅಂದ್ರೆ ಕಾನೂನು ಪದವಿ ಮೂರು ವರ್ಷ ಇಲ್ಲವೇ ಐದು ವರ್ಷದಲ್ಲಿ ಮುಗಿಸಬೇಕಾದ ವಿದ್ಯಾರ್ಥಿಗಳು ಇದೀಗ ವಿವಿಯ ಧೋರಣೆಯಿಂದ ಒಂದು ವರ್ಷ ಹೆಚ್ಚಿನ ಅವಧಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೋವಿಡ್ ವೇಳೆ ಸ್ಥಗಿತಗೊಂಡ ತರಗತಿಗಳು. ಪರೀಕ್ಷೆಗಳನ್ನು ಸರಿಯಾದ ಸಮಯಕ್ಕೆ ಮುಗಿಸದೇ ಇರುವುದರಿಂದ ವಿದ್ಯಾರ್ಥಿಗಳು ಇದೀಗ ಒಂದು ವರ್ಷದ‌ ಹೆಚ್ಚಿನ ಸಮಯ ಕಾಲಹರಣವಾಗ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಇನ್ನೂ ಈ ಕುರಿತು ಕುಲಪತಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದ ನೂರಾರು ಕಾನೂನು ಕಾಲೇಜುಗಳಲ್ಲಿ ಇನ್ನೂ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಿಲ್ಲ. ಅಲ್ಲದೇ ವಿಶ್ವ ವಿದ್ಯಾಲಯ ಸಹ ತರಗತಿಗಳನ್ನು ಆರಂಭಿಸುವ ಬಗ್ಗೆ ಸೂಚನೆ ನೀಡ್ತಿಲ್ಲ ಅಂತಾ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಜೊತೆಗೆ ಪರೀಕ್ಷೆಗೆ ದಿನಾಂಕ‌ ಘೋಷಣೆ ಮಾಡದೇ ಸಮಯವನ್ನೂ ನೀಡದೇ ಏಕಾಏಕಿ ಪರೀಕ್ಷಾ ದಿನಾಂಕ‌ ಘೋಷಣೆ ಮಾಡಿ‌ ವಿವಿ ವಿದ್ಯಾರ್ಥಿಗಳ ಭವಿಷ್ಯದ‌ ಜೊತೆ ಚೆಲ್ಲಾಟವಾಡುತ್ತಿದೆ ಅಂತಾ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.