ಕಳಸಾ ಬಂಡೂರಿಗೆ ಇನ್ನೂ 60 ದಿನಗಳಲ್ಲಿ ಒಂದು ಒಳ್ಳೆ ಸಿಹಿ‌ ಸುದ್ದಿ‌ ಕೊಡುತ್ತೇವೆ; ಶಂಕರ್‌ ಪಾಟೀಲ್ ಮುನೇನಕೊಪ್ಪ ಭರವಸೆ

ಕಳಸಾ ಬಂಡೂರಿಗೆ ಇನ್ನೂ 60 ದಿನಗಳಲ್ಲಿ ಒಂದು ಒಳ್ಳೆ ಸಿಹಿ‌ ಸುದ್ದಿ‌ ಕೊಡುತ್ತೇವೆ; ಶಂಕರ್‌ ಪಾಟೀಲ್ ಮುನೇನಕೊಪ್ಪ ಭರವಸೆ

ಧಾರವಾಡ: ಕಳಸಾ ಬಂಡೂರಿಗೆ ಸಚಿವ ಶಂಕರ್‌ ಪಾಟೀಲ್ ಮುನೇನಕೊಪ್ಪ ಅವರು ಜನರಿಗೆ ಸಿಹಿ ಸುದ್ದಿ ಕೊಡಲಿದ್ದಾರೆ. ಇನ್ನೂ 60 ದಿನಗಳಲ್ಲಿ ಒಂದು ಒಳ್ಳೆ ಸಿಹಿ‌ ಸುದ್ದಿ‌ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ‌ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯಿಸಿ, ಕಳಸಾ ಬಂಡೂರಿಗೆ ಕಾಂಗ್ರೆಸ್ ವಿರೋಧ ಮಾಡುತ್ತಲೇ ಬಂದಿದೆ.

ಈ ಹಿಂದೆ ಕಳಸಾ‌ ಬಂಡೂರಿಗೆ ಒಂದು ಹನಿ ನೀರು ಬಿಡಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಳಸಾ‌ ಬಂಡೂರಿ ಬಗ್ಗೆ ಮಾತನಾಡುವಂತದ್ದು‌ ಹಾಗೂ ಸಮಾವೇಶ ಮಾಡುವಂತ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಹೇಳಿದ್ದಾರೆ.