ಮಗಳ ಮದುವೆಗೆ 1 ಕೋಟಿ ಸೇರಿಸಿ: ಡೆತ್ ನೋಟ್ ಬರೆದಿಟ್ಟು ಪತ್ನಿ ಕೊಂದು ಉದ್ಯಮಿ ಆತ್ಮಹತ್ಯೆ

ಮಗಳ ಮದುವೆಗೆ 1 ಕೋಟಿ ಸೇರಿಸಿ: ಡೆತ್ ನೋಟ್ ಬರೆದಿಟ್ಟು ಪತ್ನಿ ಕೊಂದು ಉದ್ಯಮಿ ಆತ್ಮಹತ್ಯೆ

ತ್ನಿಯನ್ನು ಕೊಂದು ಖ್ಯಾತ ಟೆಕ್ಸ್ ಟೈಲ್ ಉದ್ಯಮಿ ಗುಂಡಿಕ್ಕಿಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಪಾಟ್ನಾದಲ್ಲಿ ಶನಿವಾರ ನಡೆದಿದೆ.

ದಂಪತಿ ಶವದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ಮಗಳ ಮದುವೆಗೆ 1 ಕೋಟಿ ವ್ಯವಸ್ಥೆ ಮಾಡಿ ಎಂದು ಬರೆಯಲಾಗಿದೆ.

ಡೆತ್ ನೋಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾಗೇಶ್ವರ್ ಧಮ್ ಭಕ್ತರಾಗಿರುವ ಉದ್ಯಮಿ ಸಂಜಯ್ ಸೇಥ್ ಡೆತ್ ನೋಟ್ ನಲ್ಲಿ ಗುರುಗಳೇ ನನ್ನನ್ನು ಕ್ಷಮಿಸಿ, ಮುಂದಿನ ಜನ್ಮ ಅಂತ ಇದ್ದರೆ ನಿಮ್ಮ ಭಕ್ತನಾಗಿ ಜನಿಸುವೆ ಎಂದು ಬರೆದಿದ್ದಾರೆ.

ಇದಕ್ಕೂ ಮುನ್ನ ವೀಡಿಯೊ ರೆಕಾರ್ಡ್ ಮಾಡಿರುವ ಸಂಜಯ್ ಸೇಥ್, ತಮ್ಮ ಬಳಿ ಸಾಲ ಪಡೆದವರು ಹಿಂತಿರುಗಿಸುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಮಕ್ಕಳ ಹಿತದೃಷ್ಟಿ ಹಾಗೂ ಮಗಳ ಮದುವೆಗಾಗಿ ದಯಮಾಡಿ ನನ್ನ ಹಣ ಕೊಡಿ. ಮಗಳ ಮದುವೆಗೆ 50ಲಕ್ಷಿಂದ 1 ಕೋಟಿ ರೂ.ವರೆಗೂ ವ್ಯವಸ್ಥೆ ಮಾಡಿ. ನನ್ನ ಮಗಳ ಖಾತೆಯಲ್ಲಿ 29 ಲಕ್ಷ ರೂ. ಇದೆ. ನಾನು ಮತ್ತು ನನ್ನ ಪತ್ನಿ ತುಂಬಾ ದೂರ ಹೋಗುತ್ತಿದ್ದೇವೆ. ಮಗಳಿಗಾಗಿ ಸಾಕಷ್ಟು ಒಡವೆ ಕೂಡ ಮಾಡಿಸಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಸಂಜಯ್ ಸೇಥ್ ಹೇಳಿದ್ದಾರೆ.

ಕಿಶೋರಿಘಂಜ್ ನಲ್ಲಿ ಪತ್ನಿ ಮೀನು ಜೊತೆ ಸಂಜಯ್ ಸೇಥ್ ಹಾಗೂ ಮಕ್ಕಳು ವಾಸವಾಗಿದ್ದರು. ಇಬ್ಬರು ಕಟ್ಟಡದ 2ನೇ ಮಹಡಿಯ ಮನೆಯ ಕೊಠಡಿಯಲ್ಲಿ ಇದ್ದಾಗ ಪ್ರಕರಣ ನಡೆದಿದೆ. ಕುಟುಂಬದ ಇತರೆ ಸದಸ್ಯರು ಮೇಲಿನ ಮಹಡಿಯಲ್ಲಿದ್ದರು. ಕುಟುಂಬದವರು ಬಂದು ನೋಡಿದಾಗ ಸಂಜಯ್ ಇನ್ನೂ ಉಸಿರಾಡುತ್ತಿದ್ದರೆ ಪತ್ನಿ ಮೀನು ಮೃತಪಟ್ಟಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಅಷ್ಟರಲ್ಲಿ ಮೃತಪಟ್ಟರು.