ನಾನು ಸಾಯೋಕ್‌ ರೆಡಿ. ಧಮ್‌ ಇದ್ದರೆ, ತಾಕತ್‌ ಇದ್ದರೆ ಬನ್ನಿ: ಸಿದ್ದರಾಮಯ್ಯ

ನಾನು ಸಾಯೋಕ್‌ ರೆಡಿ. ಧಮ್‌ ಇದ್ದರೆ, ತಾಕತ್‌ ಇದ್ದರೆ ಬನ್ನಿ: ಸಿದ್ದರಾಮಯ್ಯ

ವಿಜಯಪುರ,ಫೆಬ್ರವರಿ23: ಟಿಪ್ಪು ಸುಲ್ತಾನ್ ಮುಗಿಸಿದಂಗೆ ಸಿದ್ದಮಯ್ಯನನ್ನು‌ ಮುಗಿಸಿ ಎಂದು ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಚುನಾವಣೆ ಹೊತ್ತಲಿ ಕಾಂಗ್ರೆಸ್ ಗೆ ಇದನ್ನೆ ಅಸ್ತ್ರವನ್ನಾಗಿ ಮಾಡಿಕೊಳ್ಳಲಿದ್ಯಾ ಎಂಬ ಚರ್ಚೆ ಶುರುವಾಗಿದೆ.

ವಿಜಯಪುರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಹಾಗೂ ಸಚಿವ ಅಶ್ವತ್ಥ ನಾರಾಯಣ ವಿರುದ್ದ ಕಿಡಿಕಾರಿದ್ದು, ಸವಾಲು ಹಾಕಿದ್ದಾರೆ. ನಾನು ಯಾವತ್ತೂ ಸಾವಿಗೆ ಹೆದರಲ್ಲ. ಆದರೆ, ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ವಾಗ್ದಾಳಿ ನಡೆಸಿದ್ದಾರೆ.

ನಾನು ಬಸವಣ್ಣನವರ ವಿಚಾರಧಾರೆಯಿಂದ ನಾನು ಆಕರ್ಷಿತನಾಗಿದ್ದೇವೆ. ನಾನು ಬಸವಣ್ಣನವರ ಅನುಯಾಯಿ‌. ಬುದ್ದ, ಬಸವ, ಅಂಬೇಡ್ಕರ್, ಗಾಂಧೀಜಿ ಹೇಳಿದಂತೆ ಮಾಡುವುದು ನಮ್ಮ ಕರ್ತವ್ಯ. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ‌ ಇಲ್ಲ. ಅದಕ್ಕೆ ಮಹಾತ್ಮಾ‌ ಗಾಂಧಿಜಿಯನ್ನು ಕೊಂದಿದ್ದಾರೆ. ಗೋಡ್ಸೆ ಮೂಲಕ ಮುಗಿಸಿಬಿಟ್ಟಿದ್ದಾರೆ. ಇವರಿಗೆ ಮನುಷ್ಯತ್ವವೇ ಇಲ್ಲ.

ಇನ್ನೊಬ್ಬರನ್ನು ಪ್ರೀತಿಸುವ, ಗೌರವಿಸುವ ಮನಸ್ಥಿತಿ‌ ಇಲ್ಲ. ಇವರದ್ದು ಹೊಡಿ, ಬಡಿ,‌ ಕಡಿ‌ ಸಂಸ್ಕ್ರತಿ. ಮೊನ್ನೆ ಮಂತ್ರಿ ಹೇಳಿದ್ದಾನೆ. ಟಿಪ್ಪು ಸುಲ್ತಾನ್ ಮುಗಿಸಿದಂಗೆ ಸಿದ್ದರಾಮಯ್ಯನನ್ನು‌ ಮುಗಿಸಿ ಎಂದು ಹೇಳಿದ್ದಾನೆ. ನಾಡಿನ‌ ಜನತೆಗೆ ರಕ್ಷಣೆ ಕೊಡಬೇಕಾದ ಮಂತ್ರಿ, ಕಾನೂನು ಬಗ್ಗೆ ಗೌರವ ಇಲ್ಲದೆ ಸಿದ್ದರಾಮಯ್ಯನ ಮುಗಿಸಬೇಕು ಅಂತಾನೆ. ನನ್ನನ್ನು ಯಾವ ತಪ್ಪಿಗೋಸ್ಕರ ಮುಗಿಸಬೇಕು ಅಂತೀರಿ? ಎಂದು ಪ್ರಶ್ನಿಸಿದರು.

ನನ್ನನ್ನು ಟಿಪ್ಪುಸುಲ್ತಾನ ರೀತಿಯಲ್ಲಿ ಮುಗಿಸಬೇಕು ಎಂದು ಸಚಿವರೊಬ್ಬರು ಹೇಳಿದ್ದಾರೆ. ನಾನು ಯಾವ ತಪ್ಪು ಮಾಡಿದ್ದೇನೆ ಎಂಬುದನ್ನು ತಿಳಿಸಲಿ. ನಾನು ಸಾವಿಗೆ ಹೆದರುವುದಿಲ್ಲ. ಆದರೆ, ಜನರ ಪ್ರೀತಿ ಇರುವ ತನಕ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ. ನಾನು ಕೊಲೆ ಮಾಡಲು ಧೈರ್ಯ, ತಾಕತ್ ಇದ್ರೆ ಬನ್ನಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ನಾವು 169 ಭರವಸೆ ಕೊಟ್ಟಿದ್ದೆವು. ಐದು ವರ್ಷಗಳಲ್ಲಿ 158 ಭರವಸೆ ಇಡೇರಿಸಿದ್ದೇವೆ. ಅಲ್ಲದೆ, 30 ಹೆಚ್ಚುವರಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಸರಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೊ ಇತ್ತು. ನಾನು ಸಿಎಂ ಆದ ನಂತರ ಅದರ ಜೊತೆಗೆ ಬಸವಣ್ಣನವರ ಫೋಟೊ ಇರಬೇಕು ಎಂದು ಆದೇಶ ಮಾಡಿದ್ದೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ಶೇ. 100ಕ್ಕೆ 100ರಷ್ಟು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅರ್ಧವಾಗಿರುವ ಅನುಭವ ಮಂಟಪವನ್ನು ಪೂರ್ಣಗೊಳಿಸಿ ನಾನೇ ಅದನ್ನು ಉದ್ಘಾಟನೆ ಮಾಡುತ್ತೇನೆ. ಜೆ. ಎಚ್. ಪಟೇಲ ಕಾಲದಲ್ಲಿ ನಾವೇ ಕೂಡಲ ಸಂಗಮ ಅಭಿವೃದ್ಧಿ ಮಾಡಿದ್ದೇವೆ. ನಾವು ದೆಹಲಿಯಲ್ಲಿರುವ ಅಕ್ಷರಧಾಮದ ಮಾದರಿಯಲ್ಲಿ ಕೂಡಲ‌ ಸಂಗಮದಲ್ಲಿ ಮಾಡಲು ಹಣ ಬಿಡುಗಡೆ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದಮೇಲೆ ಮೊದಲ ಕೆಲಸವೇ ಬಸವನ‌ ಬಾಗೇವಾಡಿಯ ಬಸವಣ್ಣನ ಅಭಿವೃದ್ಧಿ ಪ್ರಾಧಿಕಾರ ಮಾಡೋಣ ಎಂದು ಸಿದ್ಧರಾಮಯ್ಯ ಆಶ್ವಾಸನೆ ನೀಡಿದರು.

ಅಲ್ಪಸಂಖ್ಯಾತರಿಗೂ ಅನ್ಯಾಯ ಮಾಡಿದ್ದಾರೆ. ನಿಮ್ಮ ಆಶಿರ್ವಾದಿಂದ ಅಧಿಕಾರಕ್ಕೆ ಬಂದರೆ ರೂ. 5000 ಕೋ. ಅಲ್ಪಸಂಖ್ಯಾತರಿಗೆ ನೀಡುತ್ತೇವೆ. ಜನರಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಹಣ ನೀಡುತ್ತೇವೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿವೆ. ಮೋದಿ ಅವರ ಅಚ್ಚೇ ದಿನ್ ಬರಲಿಲ್ಲ. ಎಲ್ಲಿದೆ ಮೋದಿ ಅವರ ಅಚ್ಚೆರ ದಿನ್ ಎಂದು ‌ವ್ಯಂಗ್ಯವಾಡಿದರು.