ರಷ್ಯಾ ತೊರೆಯುವಂತೆ ಅಮೆರಿಕ ಸೂಚನೆ
ಮಾಸ್ಕೋ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆಯೇ, ರಷ್ಯಾದಲ್ಲಿರುವ ತನ್ನ ಪ್ರಜೆಗಳಿಗೆ ದೇಶ ತೊರೆಯುವಂತೆ ಹಾಗೂ ರಷ್ಯಾಗೆ ಪ್ರಯಾಣ ಬೆಳೆಸದಂತೆ ಅಮೆರಿಕ ಸೂಚನೆ ನೀಡಿದೆ.
ಉಕ್ರೇನ್ ವಿಚಾರದಲ್ಲಿ ರಷ್ಯಾ-ಅಮೆರಿಕ ನಡುವಿನ ಶೀತಲ ಸಮರ ಮುಂದುವರಿದಿದ್ದು, ಅಮೆರಿಕ ಪ್ರಜೆಗಳನ್ನು ವಿನಾಕರಣ ಬಂಧಿಸಿ, ರಷ್ಯಾದಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುತ್ತಿದೆ ಎಂದು ಅಮೆರಿಕ ಹೈ ಕಮಿಷನ್ ಆರೋಪಿಸಿದೆ.
ಈ ಹಿನ್ನೆಲೆ ಪ್ರಜೆಗಳಿಗೆ ದೇಶ ತೊರೆಯುವಂತೆ ಸೂಚನೆ ನೀಡಿದೆ. ಜತೆಗೆ ಅಮೆರಿಕದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳಿಗೂ ರಷ್ಯಾದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಅಮೆರಿಕನ್ನರಿಗೆ ವಹಿವಾಟಿಗೂ ಸಮಸ್ಯೆ ಎದುರಾಗಬಹುದು ಎಂದು ಹೈ ಕಮಿಷನ್ ಎಚ್ಚರಿಸಿದೆ.
ಉಕ್ರೇನ್ ಮೇಲಿನ ರಷ್ಯಾ ದಾಳಿ ಖಂಡಿಸಿ, ಅಮೆರಿಕ ಕೂಡ ತನ್ನ ದೇಶದಲ್ಲಿದ್ದ ರಷ್ಯಾ ಪ್ರಜೆಗಳಿಗೆ ಈ ಹಿಂದೆ ಇದೇ ರೀತಿಯ ನಿರ್ಬಂಧ ವಿಧಿಸಿತ್ತು.