ಡಾ.ಮಂಜುನಾಥ್, ಹಿರಿಯ ಸಾಹಿತಿ ಜಿ.ಕೃಷ್ಣಪ್ಪ, ಲೇಖಕ ಎಸ್.ಷಡಕ್ಷರಿಗೆ ನಾಡೋಜ ಗೌರವ

ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರತಿಷ್ಠಿತ ನಾಡೋಜ ಗೌರವ ಪದವಿ ಈ ಬಾರಿ ಬೆಂಗಳೂರಿನ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹಿರಿಯ ಸಾಹಿತಿ ಕೃಷ್ಣಪ್ಪ ಜಿ & ಲೇಖಕ ಎಸ್.ಷಡಕ್ಷರಿ ಅವರಿಗೆ ಒಲಿದಿದೆ. ಕನ್ನಡ ವಿಶ್ವವಿದ್ಯಾಲಯಲ್ಲಿ ಡಿ.8ರಂದು ಆಯೋಜಿಸಿರುವ ನುಡಿಹಬ್ಬದಲ್ಲಿ ಮೂವರು ಗಣ್ಯರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನಾಡೋಜ ಪ್ರದಾನ ಮಾಡಲಿದ್ದಾರೆ.