ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಮತ್ತೆ ಏರಲಿದೆ ಇಎಂಐ ಹೊರೆ
ನವದೆಹಲಿ: ಕಳೆದ ಮೇ ತಿಂಗಳಿನಿಂದ ಐದು ಬಾರಿ ರೆಪೋ ದರ ಪರಿಷ್ಕರಣೆ ಮಾಡಲಾಗಿದ್ದು, ಮತ್ತೆ ರೆಪೋ ದರವನ್ನು 35 ಮೂಲಾಂಶಗಳಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಸಾಲದ ಕಂತುಗಳ ಹೊರೆ ಮತ್ತೆ ಏರಿಕೆಯಾಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿಯ ಪ್ರಕಾರ, ಡಿಸೆಂಬರ್ ನಲ್ಲಿ ರೆಪೋ ದರ 35 ಮೂಲಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ.