ನಿಮ್ಮನ್ನು ನೀವು ಬದಲಿಸಿಕೊಳ್ಳಿ ಇಲ್ಲದಿದ್ದರೆ ಬದಲಾವಣೆ ಅನಿವಾರ್ಯ: ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಎಚ್ಚರಿಕೆ

ನಿಮ್ಮನ್ನು ನೀವು ಬದಲಿಸಿಕೊಳ್ಳಿ ಇಲ್ಲದಿದ್ದರೆ ಬದಲಾವಣೆ ಅನಿವಾರ್ಯ: ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಎಚ್ಚರಿಕೆ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಿಜೆಪಿ ಸಂಸದರನ್ನು ಅಧಿವೇಶನಕ್ಕೆ ನಿಯಮಿತವಾಗಿ ಹಾಜರಾಗುವಂತೆ ಒತ್ತಾಯಿಸಿದರು ಮತ್ತು ಅವರು ತಮ್ಮನ್ನು ತಾವು ಬದಲಾಯಿಸಿಕೊಳ್ಳದಿದ್ದರೆ ಬದಲಾವಣೆ ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಯವಿಟ್ಟು ಸಂಸತ್ತು ಮತ್ತು ಸಭೆಗಳಿಗೆ ನಿಯಮಿತವಾಗಿ ಹಾಜರಾಗಿ. ಮತ್ತೆ ಮತ್ತೆ ಬೊಟ್ಟು ಮಾಡಿದರೆ ಇಷ್ಟವಾಗುವುದಿಲ್ಲ. ದಯವಿಟ್ಟು ಬದಲಾವಣೆ ಮಾಡಿ, ಇಲ್ಲದಿದ್ದರೆ ಬದಲಾವಣೆ ತಾನಾಗಿಯೇ ಆಗುತ್ತದೆ ಎಂದು ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮುಂತಾದ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಮುಂಗಾರು ಅಧಿವೇಶನದಲ್ಲಿ ಹಿಂಸಾತ್ಮಕ ವರ್ತನೆ ತೋರಿದ್ದಕ್ಕಾಗಿ 12 ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಿದ ಬಗ್ಗೆ ಬಿಜೆಪಿ ಪ್ರತಿಪಕ್ಷಗಳ ಹಿನ್ನಡೆಯನ್ನು ಎದುರಿಸುತ್ತಿರುವಂತೆಯೇ ಪ್ರಧಾನಿಯವರ ಎಚ್ಚರಿಕೆಯ ಮಾತುಗಳು ಬಂದಿವೆ.