ಯೋಗದಿಂದ ರೋಗ ಮುಕ್ತ ಜೀವನ ಸಾಧ್ಯ

ಯೋಗದಿಂದ ರೋಗ ಮುಕ್ತ ಜೀವನ ಸಾಧ್ಯ

ರೋಗ ಮುಕ್ತ ಜೀವನಕ್ಕೆ ಯೋಗವೇ ಮದ್ದು. ದೀರ್ಘಾಯುಷ್ಯರಾಗಿ ಬಾಳವಲ್ಲಿ ಯೋಗ ಸಹಕಾರಿ. ಸರ್ವರು ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಲು ವಿಕಲಚೇತನರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಮಹ್ಮದಗೌಸ್ ಕಳಸಾಪೂರ ಹೇಳಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಧಾರವಾಡ ಜಿಲ್ಲಾ ಘಟಕ ನಗರದ ಭಾರತ ಸ್ಕೌಟ್-ಗೈಡ್ಸ್ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಅನಂತರ ಯೋಗ ನಮ್ಮ ಪ್ರಾಚೀನ ಕಾಲದ ರೋಗ ನಿವಾರಣೆ ವಿದ್ಯೆ. ಪೂರ್ವಜನರಿಂದ ಈ ವಿದ್ಯೆ ಉಳಿಸಬೇಕು. ಒತ್ತಡ ಮುಕ್ತ ಜೀವನಕ್ಕೆ ಯೋಗವು ಸಹಾಯ ಮಾಡಲಿದೆ. ಯೋಗ ಒಂದು ದಿನಕ್ಕೆ ಸಿಮೀತವಾಗದೆ, ಜೀವನದ ಭಾಗವಾಗಬೇಕು ಎಂದು ಹೇಳಿದರು.
ಭಾರತದ ಯೋಗಕ್ಕೆ ವಿದೇಶಿಗರು ಮಾರುಹೋಗಿದ್ದು, ಭಾರತೀಯರಾದ ನಾವು ಯೋಗ ನಿರಾಕರಿಸುವುದು ಸರಿಯಲ್ಲ. ಯೋಗದಿಂದ ಸದೃಢ ಶರೀರ, ಮನಸು ಹೊಂದಲು ಸಾಧ್ಯವಿದೆ. ಔಷಧಿ ಇಲ್ಲದೆ ರೋಗ ನಿವಾರಿಸುವ ಏಕೈಕ ಶಕ್ತಿ ಯೋಗಕ್ಕಿದೆ. ಇದನ್ನು ಅರಿತ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಜೀ ಈ ಯೋಗ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.