ಕೆಎಲ್ಇ ಟೆಕ್ ವಿದ್ಯಾರ್ಥಿಗಳಿಂದ ವೈಜ್ಞಾನಿಕ ವಿಜ್ಞಾನ ಪ್ರದರ್ಶನ

ಕೆಎಲ್ಇ ಟೆಕ್ ವಿದ್ಯಾರ್ಥಿಗಳಿಂದ ವೈಜ್ಞಾನಿಕ ವಿಜ್ಞಾನ ಪ್ರದರ್ಶನ

ಹುಬ್ಬಳ್ಳಿ: ಕೆಎಲ್ಇ ಇಂಜಿನಿಯರಿಂಗ್‍ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ತತ್ವ ಸಿದ್ದಾಂತ ಆಧಾರಿತ ವಿಜ್ಞಾನದ ಮಾದರಿಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇಂದು ಕೆಎಲ್ ಇ ಟೆಕ್ ಕ್ಯಾಂಪಸ್ ನಲ್ಲಿ ನಡೆಯಿತು.

ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್ ಇ ಟೆಕ್ ಕಾಲೇಜು ಆವರಣದಲ್ಲಿ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳು ತಯಾರಿಸಿರುವ 130 ಉತ್ಪನಗಳ ಪ್ರದರ್ಶನ ಪ್ರಯೋಗ ವಸಂತ-2022 ನೆರವೇರಿತು. ಮೊದಲ ವರ್ಷದ 540 ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿರುವ ಪ್ರಾಜೆಕ್ಟ್‌ ಗಳಲ್ಲಿ ಆಯ್ದ 130 ಪ್ರಾಜೆಕ್ಟ್ ಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.

ಉತ್ಪನ್ನಗಳನ್ನು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಅಶೋಕ ಶೆಟ್ಟರ್, ನಿರ್ದೇಶಕಿ ಡಾ.ವಿಜಯಲಕ್ಷ್ಮಿ ಎಮ್, ಎಕ್ಸಿಕ್ಯೂಟಿವ್ ಡೀನ್ ಡಾ.ಬಿ.ಎಲ್.ದೇಸಾಯಿ, ಡಾ.ಪ್ರಕಾಶ ತೆರವಿ ವೀಕ್ಷಿಸಿ, ಪ್ರಾಜೆಕ್ಟ್ ತಯಾರಿಸಿರುವ ವಿದ್ಯಾರ್ಥಿಗಳಿಂದ ಅವುಗಳಿಂದಾಗುವ ಉಪಯೋಗಗಳ ಬಗ್ಗೆ ಮಾಹಿತಿ ಪಡೆದರು.

ಪ್ರದರ್ಶನದಲ್ಲಿ ಅಗ್ರಿ ಬೊಟ್, ಸ್ಮಾರ್ಟ್ ಟ್ರಾಶ್ ಕ್ಯಾನ್, ಇಂಟರ್ಯಾಕ್ಟಿವ್ ಸಿಸ್ಟಮ್, ಇಂಟರ್ಯಾಕ್ಟಿವ್ ಸೈನ್ಸ್ ಮಾಡೆಲ್, ಅಟೋಮೆಟಿಕ್ ಲೋಡಿಂಗ್ ಆ್ಯಂಡ್ ಅಡಲೋಡಿಂಗ್ ಮಷಿನ್, ಸಾರ್ಟಿಂಗ್ ಮಷಿನ್, ಪ್ಯಾಟೇರ್ನ್ ಡ್ರಾಯಿಂಗ್ ಬೊಟ್,  ಲಾಂಚಿಂಗ್ ಮಷಿನ್, ಅಟೋಮೇಟಿಕ್ ಕಪ್ ಕ್ಲಷರ್ ಮಷಿನ್, ರಂಗೋಲಿ ಬೊಟ್ ಸೇರಿದಂತೆ ಹಲವಾರು ಅಭಿವೃದ್ಧಿ ಪಡಿಸಿದ್ದ ಉತ್ಪನ್ನಗಳು  ಗಮನ ಸೆಳೆದವು. ಇನ್ನೂ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಭಾಗಿಯಾಗಿ ಪ್ರದರ್ಶನ ವೀಕ್ಷಿಸಿದರು.

ನವೀನ ಸೋಲಾರಗೊಪ್ಪ ನೈನ್ ಲೈವ್ ನ್ಯೂಸ್ ಹುಬ್ಬಳ್ಳಿ