ಅಪಘಾತ ತಪ್ಪಿಸಲು ಹೋಗಿ ಬಸ್ ಪಲ್ಟಿ

ಧಾರವಾಡ ಜಿಲ್ಲೆಯ ಅನ್ನಿಗೇರಿ ತಾಲೂಕಿನ ಬಸಾಪುರ ಗ್ರಾಮದ ಹತ್ತಿರ ಸರಕಾರಿ ಬಸ್ ಪಲ್ಟಿಯಾಗಿ ಹಲವಾರು ಜನರಿಗೆ ಗಾಯಗಳಾಗಿರುವ ಘಟನೆ ನಿನ್ನೆ ನಡೆದಿದೆ. ಬಸ್ ನವಲಗುಂದ ದಿಂದ ಗದಗ ಕಡೆಗೆ ಚಲಿಸುವಾಗ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ತನ್ನ ನಿಯ0ತ್ರಣ ಕಳೆದು ಕೊಡಿದ್ದರಿಂದ ಅಪಘಾತ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುತ್ತದೆ. ಅಣ್ಣಿಗೇರಿ ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.