ಡಿಕೆಶಿ ಮನೆಯಲ್ಲಿ ಸಿಕ್ಕ ಕೋಟಿಗಟ್ಟಲೆ ಹಣದ ಬಗ್ಗೆ ಯಾರಿಗಾದರೂ ಲೆಕ್ಕ ಕೊಟ್ಟಿದ್ದಾರಾ?: ಈಶ್ವರಪ್ಪ ವಾಗ್ದಾಳಿ

ಡಿಕೆಶಿ ಮನೆಯಲ್ಲಿ ಸಿಕ್ಕ ಕೋಟಿಗಟ್ಟಲೆ ಹಣದ ಬಗ್ಗೆ ಯಾರಿಗಾದರೂ ಲೆಕ್ಕ ಕೊಟ್ಟಿದ್ದಾರಾ?: ಈಶ್ವರಪ್ಪ ವಾಗ್ದಾಳಿ

ಚಾಮರಾಜನಗರ: ಇಂದಿನಿಂದ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಆರಂಭಗೊಂಡಿದೆ. ಈ ಯಾತ್ರೆಯಲ್ಲಿ ಶಾಸಕ ಕೆ. ಎಸ್‌ ಈಶ್ವರಪ್ಪ ಭಾಗಿಯಾಗಿದ್ದಾರೆ. ಯಾತ್ರಗೂ ಮುನ್ನವೇ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬರಿ ಮಾತು ಎತ್ತಿದ್ದರೆ ಸಾಕು ಭ್ರಷ್ಟಾಚಾರದ ಬಗ್ಗೆನೇ ಹೇಳುತ್ತಾರೆ. ಮತ್ತೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಶಿವಕುಮಾರ್ ತಿಹಾರ್ ಜೈಲಿನ ಅತಿಥಿಯಾಗಿದ್ದು ಯಾಕೆ ಅನ್ನೋದನ್ನು ಹೇಳ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಮನೆಯಲ್ಲಿ ಸಿಕ್ಕ ದಾಖಲೆರಹಿತ ಕೋಟಿಗಟ್ಟಲೆ ಹಣದ ಬಗ್ಗೆ ಅವರು ಯಾರಿಗಾದರೂ ಲೆಕ್ಕ ಕೊಟ್ಟಿದ್ದಾರಾ? ಎಂದು ಡಿ.ಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಬಿಜೆಪಿ ಸರ್ಕಾರ ಸರ್ಕಾರಿ ನೌಕರರನ್ನು ಅಣ್ಣ-ತಮ್ಮಂದಿರಂತೆ ನೋಡಿಕೊಂಡಿದೆ.ಅವರಿಗೆ ಎಲ್ಲ ಸೌಲಭ್ಯ ಕೂಡ ನೀಡಲಾಗಿತ್ತು.ಆದರೆ ಈಗ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರಿಂದ ಜನಸಾಮಾನ್ಯರಿಗೆ ತೊಂದರೆಯಾದರೆ ನೌಕರರಿಗೆ ಒಳ್ಳೆಯದಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಈಗಾಗಲೇ ಬಿಜೆಪಿ ಸರ್ಕಾರ ಸರ್ಕಾರಿ ನೌಕರರಿಗೆ ಹೆಚ್ಚಿನ ಸವಲತ್ತು ನೀಡಲಾಗಿದೆ. ಚುನಾವಣಾ ಸಮಯದಲ್ಲಿ ಮುಷ್ಕರ ಮಾಡಿದರೆ ಸರ್ಕಾರ ಬಗ್ಗುತ್ತದೆ ಎಂಬುದು ನೌಕರರ ನಂಬಿಕೆ. ಆದರೆ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಸಿಗುತ್ತದೆ ಎಂದರು