ರೈತರ ಮೇಲಿನ ಕಾಳಜಿಯಲ್ಲ, ಮುಂಬರುವ ಚುನಾವಣಾ ಭಯದಿಂದ ರೈತರ ಮೇಲಿನ ಕಾಳಜಿಯಲ್ಲ, ಮುಂಬರುವ ಚುನಾವಣಾ ಭಯದಿಂದ ಕೃಷಿ ಕಾಯ್ದೆ ವಾಪಸ್: ಚಿದಂಬರಂ

ನವದೆಹಲಿ: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ರೈತರ ಮೇಲಿನ ಕಾಳಜಿಯಾಗಲಿ ಅಥವಾ ತಮ್ಮ ಧೋರಣೆಯನ್ನು ಬದಲಾಯಿಸಿ ತೆಗೆದುಕೊಂಡಿಲ್ಲ. ಮುಂಬರುವ ಚುನಾವಣೆಯ ಭಯದಲ್ಲಿ ಈ ಘೋಷಣೆ ಹೊರಡಿಸಿದೆ ಎಂದು ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಟೀಕಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಭಟನೆಯಿಂದ ಇದು ಸಾಧ್ಯವಾಗಿಲ್ಲ, ಬದಲಾಗಿ ಮುಂಬರುವ ಚುನಾವಣೆಯ ಭಯದಿಂದ ಸಾಧ್ಯವಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವುದು ಹೃತ್ಪೂರ್ವಕವಾಗಿ ಅಲ್ಲ ಎಂದು ಚಿದಂಬರಂ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಏನೇ ಇರಲಿ, ಇದೊಂದು ರೈತರ ಬಹುದೊಡ್ಡ ವಿಜಯವಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷ ಕೂಡಾ ಕೃಷಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿರುವುದಾಗಿ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ಮುಂಬರುವ ಚುನಾವಣೆಯಲ್ಲಿನ ಭಯದಿಂದ ಪ್ರಧಾನಿ ಈ ನಿರ್ಧಾರ ತೆಗೆದುಕೊಂಡಿದ್ದರೆ, ನೋಟು ರದ್ದತಿಯೂ ಹಿಮಾಲಯನ್ ಬ್ಲಂಡರ್ ನಂತೆ ಎಂಬುದನ್ನು ಒಪ್ಪಿಕೊಳ್ಳಬೇಕು. ಚೀನಾ ಸೇನೆ ಭಾರತದ ಗಡಿಯೊಳಗೆ ನುಸುಳಿ, ನಮ್ಮ ಜಾಗವನ್ನು ಕಬಳಿಸಿರುವುದನ್ನು ಒಪ್ಪಿಕೊಳ್ಳಬೇಕು. ಅದೇ ರೀತಿ ಸಿಎಎ ಕೂಡಾ ತಾರತಮ್ಯದ ಕಾಯ್ದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ನವೆಂಬರ್ 19) ಮೂರು ಕೃಷಿ ಕಾಯ್ದೆಗಳನ್ನು ಕೇಮದ್ರ ಸರ್ಕಾರ ವಾಪಸ್ ಪಡೆಯುವುದಾಗಿ ಘೋಷಿಸಿದ್ದರು.