ಬೆಂಗಳೂರಿನಲ್ಲಿ ಆರೋಪಿ ಜೈಲಿನಲ್ಲೇ ತನ್ನ ಹೆಂಡತಿ,ಮಕ್ಕಳಿಂದ ಗಾಂಜಾ ದಂಧೆ; ಮಹಿಳೆ ಪೊಲೀಸರ ಬಲೆಗೆ

ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಗಾಂಜಾ ದಂಧೆ ನಡೆಸಿದ್ದಾರೆ. ಇದೀಗ ಬೆಂಗಳರಿನಲ್ಲಿ ಆರೋಪಿ ಜೈಲಿನಲ್ಲೇ ಕೂತುಕೊಂಡೇ ತನ್ನ ಹೆಂಡತಿ ಮಕ್ಕಳಿಂದ ಗಾಂಜಾ ದಂಧೆ ಮುಂದುವರೆಸಿದ್ದಾರೆ.
ಈ ಹಿನ್ನೆಲೆ ಮಹಿಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಇನ್ನು ಜೆಜೆ ನಗರ ಪೊಲೀಸರು ಆತನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದರು. ಪತಿ ಬಳಿಕ ಫೀಲ್ಡ್ಗೆ ಇಳಿದ ಪತ್ನಿ ಗಾಂಜಾ ಮಾರಾಟ ಮಾಡುವುದನ್ನು ಮುಂದುವರೆಸಿದ್ದಾಳೆ. ಗಾಂಜಾ ತರಲು ತನ್ನ ಮೂವರು ಮಕ್ಕಳೇ ಅಸ್ತ್ರವಾಗಿ ಬಳಸಿಕೊಂಡಿದ್ದಾಳೆ. 1,3,7 ವರ್ಷದ ಮೂವರು ಮಕ್ಕಳನ್ನು ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಮಕ್ಕಳು, ತಾಯಿ ಜೊತೆ ಹೋಗಿ ಬ್ಯಾಗ್ನಲ್ಲಿ ಗಾಂಜಾ ತಂದು ಡೀಲ್ ಮಾಡುತ್ತಿದ್ದರು ಎಂದು ಮಾಹಿತಿ ಬಯಲಾಗಿದೆ.