ಯಶ್, ರಾಧಿಕಾ ಪಂಡಿತ್ ಪುತ್ರಿ ಐರಾಗೆ ಮೂರನೇ ವರ್ಷದ ಸಂಭ್ರಮ | Yash Radhika | Bengaluru |

ಸ್ಯಾಂಡಲ್ವುಡ್ನ ಸ್ಟಾರ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಗಳು ಐರಾ ಯಶ್ಗೆ ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಉದ್ಯಾನವನದಲ್ಲಿ ಮಗಳ ಕೈ ಹಿಡಿದು ನಡೆಯುತ್ತಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್, ನಾನು ನಿನ್ನ ಜೀವನದುದ್ದಕ್ಕೂ ಇದೇ ರೀತಿ ಕೈ ಹಿಡಿದು ನಡೆಯುತ್ತೇನೆ. ನನ್ನ ದೇವತೆಗೆ ಜನುಮ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಐರಾ ಯಶ್ ಮೊದಲಿನಿಂದಲೂ ಚುರುಕು. ರಾಧಿಕಾ ಪಂಡಿತ್ ಅವರು ಮೊದಲಿನಿಂದಲೂ ಐರಾ ಜೊತೆಗಿನ ಮುದ್ದಾದ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾ ಅವರ ಸಂತೋಷವನ್ನು ತಮ್ಮ ಸಂತೋಷದಂತೆಯೇ ಸಂಭ್ರಮಿಸುತ್ತಾರೆ. ಈಗಾಗಲೇ ಇವರ ಹುಟ್ಟುಹಬ್ಬದ ಪೋಸ್ಟನ್ನು 1,71,962ಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.