ಡಿ.ಕೆ.ಶಿವಕುಮಾರ್ ಅವರು ನೆಹರು ಫ್ಯಾಮಿಲಿ ಹೊಗಳಿದ್ರೆ ಮಾತ್ರ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ-- ಬಿ.ಸಿ.ಪಾಟೀಲ್

ಹಿರೇಕೆರೂರ ತಾಲ್ಲೂಕು ಬಸರೀಹಳ್ಳಿ ಗ್ರಾಮದ ಬಳಿ ಇರೋ ಹೆಲಿಪ್ಯಾಡ್ ನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗ್ರಾಮ. ಡಿ.ಕೆ.ಶಿವಕುಮಾರ ಅವರು ನೆಹರು ಫ್ಯಾಮಿಲಿ ಹೊಗಳಿದ್ರೆ ಕೆಪಿಸಿಸಿ ಅಧ್ಯಕ್ಷರಾಗಿ ಇರ್ತಾರೆ. ಇಲ್ಲದಿದ್ರೆ ಅವರನ್ನ ಕಿತ್ತು ಬಿಸಾಕ್ತಾರೆ. ಅದಕ್ಕೆ ಅವರು ಅವರನ್ನ ಹೊಗಳಿಕೊಂಡು ಹೋಗ್ತಿದ್ದಾರೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ತ್ಯಾಗದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ತರೋ ಸಂದರ್ಭದಲ್ಲಿ ಯಾವುದೇ ಪಕ್ಷ, ಪಂಗಡಗಳು, ರಾಜಕೀಯ ಇರ್ಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇರ್ಲಿಲ್ಲ. ಇಂಗ್ಲೀಷರ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆ ದೇಶಕ್ಕೆ ಸ್ವಾತಂತ್ರ್ಯ ಬರಬೇಕು ಅಂತಾ ಹೋರಾಟ ಮಾಡಿದ್ದಾರೆ. ಅದರಲ್ಲಿ ನೆಹರು ದೊಡ್ಡವರಾದರು, ಪ್ರಧಾನ ಮಂತ್ರಿಗಳಾದರಷ್ಟೆ.