'ವರ್ಕ್ ಫ್ರಂ ಹೋಂ' ಮುಂದುವರಿಸಲು ಐಟಿ ಕಂಪನಿಗಳಿಂದ ಚಿಂತನೆ

'ವರ್ಕ್ ಫ್ರಂ ಹೋಂ' ಮುಂದುವರಿಸಲು ಐಟಿ ಕಂಪನಿಗಳಿಂದ ಚಿಂತನೆ

ಹಲವು ರಾಷ್ಟ್ರಗಳಲ್ಲಿ ಕೋವಿಡ್ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ತೋರಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳಬೇಕು. ಎಂಬ ಲೆಕ್ಕಾಚಾರದಲ್ಲಿದ್ದ ಐಟಿ ಕಂಪನಿಗಳು ಕೋವಿಡ್ ಮತ್ತೆ ಅಬ್ಬರಿಸುವ ಆತಂಕದ ಕಾರಣಕ್ಕೆ ತಮ್ಮ ನಿರ್ಧಾರ ಮರುಪರಿಶೀಲಿಸಲು ಮುಂದಾಗಿವೆ. ಈ ವರ್ಷಾಂತ್ಯದವರೆಗೂ 'ವರ್ಕ್ ಫ್ರಮ್ ಹೋಮ್' ಮುಂದುವರಿಸಲು ಕೆಲವೊಂದು ಕಂಪನಿಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.