ಸಿಬಿಎಸ್‌ಇ ೧೦ ನೇ ೧೨ನೇ ಕಂಪಾರ್ಟ್ಮೆಟ್ ಪರೀಕ್ಷೆ ೨೦೨೧ರ ದಿನಾಂಕದ ಪಟ್ಟಿ ಬಿಡುಗಡೆ

ಸಿಬಿಎಸ್‌ಇ ೧೦ ನೇ ೧೨ನೇ ಕಂಪಾರ್ಟ್ಮೆಟ್ ಪರೀಕ್ಷೆ ೨೦೨೧ರ ದಿನಾಂಕದ ಪಟ್ಟಿ ಬಿಡುಗಡೆ

ಸಿಬಿಎಸ್‌ಇ ೧೦ ನೇ ೧೨ನೇ ಕಂಪಾರ್ಟ್ಮೆAಟ್ ಪರೀಕ್ಷೆ-೨೦೨೧ರ ದಿನಾಂಕದ ಪಟ್ಟಿ ಬಿಡುಗಡೆ


ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ  ೧೦ ಮತ್ತು ೧೨ನೇ ತರಗತಿಯ ಖಾಸಗಿ ವಿದ್ಯಾರ್ಥಿಗಳ ಸುಧಾರಣಾ ಮತ್ತು ಕಂಪಾರ್ಟ್ಮೆಟ್ ಪರೀಕ್ಷೆಗಳಿಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ವೇಳಾಪಟ್ಟಿಯಂತೆ ೧೦ನೇ ತರಗತಿ ಪರೀಕ್ಷೆಗಳು ಆಗಸ್ಟ್ ೨೫ ರಂದು ಪ್ರಾರಂಭಗೊಡು, ಸೆಪ್ಟೆಂಬರ್ ೮ಕ್ಕೆ ಮುಕ್ತಾಯಗೊಳ್ಳಲಿದೆ. ಇನ್ನು ೧೨ನೇ ತರಗತಿ ಪರೀಕ್ಷೆ ಆಗಸ್ಟ್ ೨೫ರಂದು ಪ್ರಾರಂಭವಾಗಿ ಸೆಪ್ಟೆಂಬರ್ ೧೫ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ವೇಳಾಪಟ್ಟಿ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದೆ.
ಬೆಳಿಗ್ಗೆ ೧೦:೩೦ಕ್ಕೆ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಉತ್ತರ ಪತ್ರಿಕೆಗಳನ್ನ ಬೆಳಿಗ್ಗೆ ೧೦: ೦೦ಕ್ಕೆ ವಿತರಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನ ಬೆಳಿಗ್ಗೆ ೧೦:೧೫ ಕ್ಕೆ ವಿತರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಪತ್ರಿಕೆಯನ್ನ ಓದಲು ೧೫ ನಿಮಿಷಗಳನ್ನ ನೀಡಲಾಗುತ್ತದೆ. ಪ್ರತಿ ಪರೀಕ್ಷೆಯ ಅವಧಿಯನ್ನ ಹಾಲ್ ಟಿಕೇಟ್‌ನಲ್ಲಿ ಪರೀಕ್ಷೆಯ ಹೆಸರಿನೊಂದಿಗೆ ಉಲ್ಲೇಖಿಸಲಾಗಿದೆ.
ಸುಧಾರಣಾ ಪರೀಕ್ಷೆಗಳಿಗೆ ಹಾಜರಾಗಬಹುದಾದ ಅಭ್ಯರ್ಥಿಗಳ ಅರ್ಹತೆಯನ್ನ ಸಿಬಿಎಸ್ ಇ ಹಂಚಿಕೊAಡಿದೆ. ಟ್ಯಾಬ್ಯುಲೇಶನ್ ನೀತಿಯ ಆಧಾರದ ಮೇಲೆ ಅಂಗೀಕರಿಸಲ್ಪಟ್ಟ ಅಭ್ಯರ್ಥಿಗಳು. ಪಡೆದ ಅಂಕಗಳಿದ ತೃಪ್ತರಾಗದವರು ಫಲಿತಾಂಶದಲ್ಲಿ ಕಂಪಾರ್ಟ್ ಮೆಂಟ್ ವಿಭಾಗದಲ್ಲಿ ಸ್ಥಾನ ಪಡೆದವರು, ಫಲಿತಾಂಶವನ್ನು ಲೆಕ್ಕಹಾಕಲು ಸಾಧ್ಯವಾಗದ ಅಭ್ಯರ್ಥಿಗಳು ಮತ್ತು ಐದು ಮುಖ್ಯ ವಿಷಯಗಳಿಂದ ಒಂದು ಪೇಪರ್ ತೆರವುಗೊಳಿಸದ ಅಭ್ಯರ್ಥಿಗಳು ಈ ಪರೀಕ್ಷೆಗೆ ಆರ್ಹರಾಗುತ್ತಾರೆ.
ಪ್ರವೇಶ ಪತ್ರಗಳನ್ನ ಡೌನ್ ಲೋಡ್ ಮಾಡುವ ದಿನಾಂಕದ ಬಗ್ಗೆ ಶಾಲೆಗಳಿಗೆ ಮಾಹಿತಿ ನೀಡಲಾಗುವುದು ಎಂದು ಸಿಬಿಎಸ್ ಇ ಹೇಳಿದ್ದು, ಕಟ್ಟುನಿಟ್ಟಾದ ಕೋವಿಡ್-೧೯ ಶಿಷ್ಟಾಚಾರಗಳನ್ನ ಅನುಸರಿಸಿ ನಿಯೋಜಿತ ಕೇಂದ್ರಗಳಲ್ಲಿ ಪರೀಕ್ಷೆಗಳನ್ನ ನಡೆಸಲಾಗುತ್ತೆ ಎಂದು ತಿಳಿಸಿದೆ.