ಭಾರತೀಯ ವಾಯುಪಡೆಗೆ 89ನೇ ವರ್ಷಾಚರಣೆ: ಶುಭ ಕೋರಿದ ಪ್ರಧಾನಿ ಮೋದಿ, ಕೋವಿಂದ್, ರಾಜನಾಥ್ ಸಿಂಗ್

ಭಾರತೀಯ ವಾಯುಪಡೆಗೆ 89ನೇ ವರ್ಷಾಚರಣೆ: ಶುಭ ಕೋರಿದ ಪ್ರಧಾನಿ ಮೋದಿ, ಕೋವಿಂದ್, ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ವಾಯು ಪಡೆ ಸ್ಥಾಪನೆಯಾದ 89ನೇ ವರ್ಷದ ಆಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ವಾಯುಪಡೆಯ ಈ ವಿಶೇಷ ದಿನದಂದು ನಮ್ಮ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳನ್ನು ಕೋರುತ್ತೇನೆ. ಭಾರತೀಯ ವಾಯುಪಡೆಯು ಧೈರ್ಯ, ಪರಿಶ್ರಮ ಮತ್ತು ವೃತ್ತಿಪರತೆಗೆ ಸಮಾನಾರ್ಥಕವಾಗಿದೆ. ಅವರು ದೇಶವನ್ನು ರಕ್ಷಿಸುವಲ್ಲಿ ಮತ್ತು ಸವಾಲುಗಳ ಸಮಯದಲ್ಲಿ ತಮ್ಮ ಮಾನವೀಯ ಮನೋಭಾವದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

'ವಾಯು ಯೋಧರು, ಯೋಧರು ಮತ್ತು ಅವರ ಕುಟುಂಬಗಳಿಗೆ ವಾಯುಪಡೆಯ ದಿನದ ಶುಭಾಶಯಗಳು. ಶಾಂತಿ ಮತ್ತು ಯುದ್ಧದ ಸಮಯದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಭಾರತೀಯ ವಾಯುಪಡೆಯ ಬಗ್ಗೆ ರಾಷ್ಟ್ರವು ಹೆಮ್ಮೆಪಡುತ್ತದೆ. IAF ತನ್ನ ಶ್ರೇಷ್ಠತೆಯ ಗುಣಮಟ್ಟವನ್ನು ಉಳಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಇತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ವಾಯುಪಡೆಗೆ ಶುಭ ಕೋರಿ ಟ್ವೀಟ್ ಮಾಡಿದ್ದು, ವಾಯುಪಡೆ ಸ್ಥಾಪನೆಯ 89ನೇ ವರ್ಷದ ಆಚರಣೆ ನಿಮಿತ್ತ ಶುಭಾಶಯ ಕೋರಿದ್ದಾರೆ.