PRO KABADDI 2022: ಯು ಮುಂಬಾ ವಿರುದ್ಧ ಗೆದ್ದ ಹರಿಯಾಣ
ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ ನ ಮಂಗಳವಾರದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ 35-33 ಅಂಕಗಳಿಂದ ಯು ಮುಂಬಾ ತಂಡವನ್ನು ಸೋಲಿಸಿದೆ. ಹರಿಯಾ ತಂಡದ ಪರವಾಗಿ ಮಂಜಿತ್ ಮತ್ತು ಮೋಹಿತ್ ತಲಾ 7 ಅಂಕ ಕಲೆ ಹಾಕಿದರು. ಯು ಮುಂಬಾ ತಂಡದ ಆಶಿಷ್, ಜೈ ಭಗವಾನ್ ಮತ್ತು ರಿಂಕು ತಲಾ 6 ಅಂಕ ಕಲೆ ಹಾಕಿದರು. ಇದರೊಂದಿಗೆ ಅಂಕ ಪಟ್ಟಿಯಲ್ಲಿಮುಂಬಾ 7ನೇ ಸ್ಥಾನದಲ್ಲಿದ್ದರೆ ಹರಿಯಾಣ 10 ಸ್ಥಾನದಲ್ಲಿದೆ.