ದಿಲ್ಲಿ; ಪಶ್ಚಿಮ ಭಾಗದಲ್ಲಿ ಲಘು ಭೂಕಂಪನ

ದಿಲ್ಲಿಯ ಪಶ್ಚಿಮ ಭಾಗದಲ್ಲಿ ಮಂಗಳವಾರ ಲಘು ಭೂಕಂಪ ಸಂಭವಿಸಿದೆ. ರಾತ್ರಿ 9.30ರ ಸುಮಾರಿಗೆ ಭೂಮಿ ಕಂಪಿಸಿದ್ದು, ರಿಕ್ಟೆರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲಾಗಿದೆ. ನ. 12ರಂದು ದಿಲ್ಲಿ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ಭೂಮಿ ಕಂಪಿಸಿದಅನುಭವವಾಗಿತ್ತು. ಆಗ ಸುಮಾರು 5 ಸೆಕೆಂಡ್‌ಗೂ ಹೆಚ್ಚು ಕಾಲ ಭೂಮಿ ಕಂಪಿಸಿತ್ತು. ಆ ಅನುಭವ ಮಾಸುವ ಮುನ್ನವೇ ಮತ್ತೊಮ್ಮೆ ಜನರು ಬೆಚ್ಚಿ ಬಿದ್ದಿದ್ದಾರೆ.