ಬೆಂಗಳೂರು ಹುಡುಗಿ ಜೊತೆ ಅಂಬಿ ಪುತ್ರನ 'ನಿಶ್ಚಿತಾರ್ಥ' ಫಿಕ್ಸ್

ಬೆಂಗಳೂರು ಹುಡುಗಿ ಜೊತೆ ಅಂಬಿ ಪುತ್ರನ 'ನಿಶ್ಚಿತಾರ್ಥ' ಫಿಕ್ಸ್

ರೆಬೆಲ್ ಸ್ಟಾರ್ ಅಂಬರೀಶ್ & ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಶೀಘ್ರದಲ್ಲೇ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಡಿ.11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಮೂಲದ ಹುಡುಗಿ ಜೊತೆ ಅಭಿಷೇಕ್ ವಿವಾಹ ನಿಶ್ಚಿತಾರ್ಥವಾಗಲಿದ್ದು, ಇದು ಅರೆಂಜ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ. ಈಗಾಗಲೇ ಉಭಯ ಕುಟುಂಬಗಳು ಮಾತುಕತೆ ನಡೆಸಿದ್ದು ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.