ಸುಚೇಂದ್ರಗೆ ಕೈಕೊಟ್ಟು ಮತ್ತೊಂದು ಮದುವೆಯಾದ ಪವಿತ್ರ ಲೋಕೇಶ್- ಇದು ಪವಿತ್ರಗೆ ಎಷ್ಟನೆ ಮದುವೆ ಗೊತ್ತಾ- ಆತ ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ…?

ಸ್ಯಾಂಡಲ್ ವುಡ್ ನಟಿ ಪವಿತ್ರ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಷ್ಟೆ ಅಲ್ಲದೆ ಪವಿತ್ರ ಲೋಕೇಶ್ ಸುಚೇಂದ್ರ ಪ್ರಸಾದ್ ಬಿಟ್ಟು ಬೇರೆ ಮದುವೆ ಆಗಿದ್ದಾರೆ.
ಈ ದಂಪತಿ ಬದುಕಿನಲ್ಲಿ ಬಿರುಗಾಳಿ ಬೀಸಿರುವುದು ಸಹಜವಾಗಿ ಸಿನಿ ಪ್ರಿಯರಿಗೆ ಶಾಕ್ ಆಗಿದೆ.ಅಂದ ಹಾಗೆ ಪವಿತ್ರ ಲೋಕೇಶ್ ಅವರು ತೆಲಗು ನಟ ಮಹೇಶ್ ಬಾಬು ಅಣ್ಣನ ಜೊತೆ ಮದುವೆ ಆಗಿದ್ದಾರೆ ಎನ್ನಲಾಗಿದೆ.ಇದು ಪವಿತ್ರ ಲೋಕೇಶ್ ಗೆ ಮೂರನೆ ಮದುವೆಯಾದರೆ ನರೇಶ್ ಗೆ ಇದು ನಾಲ್ಕನೇ ಮದುವೆಯಾಗಿದೆ. ಪವಿತ್ರ ಲೋಕೇಶ್ ಅವರು ಸಾಫ್ಟ್ ವೇರ್ ಇಂಜಿನಿಯರ್ ಮದುವೆಯಾಗಿ ಡಿವೋರ್ಸ್ ಪಡೆದು ಸುಚೇಂದ್ರ ಪ್ರಸಾದ್ ಜೊತೆ ಮದುವೆ ಆಗಿದ್ದರು.
ಈಗ ಸುಚೇಂದ್ರ ಪ್ರಸಾದ್ ರಿಂದ ಕೂಡ ದೂರವಾಗಿರುವ ಪವಿತ್ರ ಲೋಕೇಶ್ ನರೇಶ್ ಅವರನ್ನು ಮದುವೆಯಾಗಿದ್ದಾರೆ. ಮಹಾಬಲೇಶ್ವರಗೆ ಹೋಗಿ ಸ್ವಾಮೀಜಿರೊಬ್ಬರ ಆಶೀರ್ವಾದ ಪಡೆದು ಇಬ್ಬರು ಮದುವೆಯಾಗಿದ್ದಾರೆ.
ಪವಿತ್ರ ಲೋಕೇಶ್ ಅವರಿಗೆ 43 ವರ್ಷವಾದರೆ, ನರೇಶ್ ಗೆ 63 ವರ್ಷ ನರೇಶ್ ಸುಮಾರು 6 ಸಾವಿರ ಕೋಟಿ ಆಸ್ತಿ ಒಡೆಯರಾಗಿದ್ದಾರೆ.
9ಲೈವ್ ನ್ಯೂಸ್ ಬ್ಯುರೊ ರಿಪೋರ್ಟ್