ಸೂರ್ಯ ನಟನೆಯ 'ಜೈ ಭೀಮ್' ಪಾರ್ಟ್ 2 ಬರುತ್ತಾ?
ಕಾಲಿವುಡ್‌ನಲ್ಲಿ 'ಜೈ ಭೀಮ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ನಟ ಸೂರ್ಯ ಅವರ ಲಾಯರ್ ಗತ್ತಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಈ ಚಿತ್ರದ ಪಾರ್ಟ್ 2 ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. 'ಜೈ ಭೀಮ್' ಸಿನಿಮಾ ನೋಡಿ ಇಷ್ಟಪಟ್ಟವರಿಗೆ ಇದೀಗ ಈ ವಿಚಾರ ನಿಜಕ್ಕೂ ಸಿಹಿ ಸುದ್ದಿ ಎಂದೇ ಹೇಳಬಹುದು. ಸಂಕಷ್ಟದಲ್ಲಿರುವವರ ಪರ ನಿಂತು ಖಡಕ್ ವಕೀಲ ಪಾತ್ರದಲ್ಲಿ ನಟ ಸೂರ್ಯ ಕಮಾಲ್ ಮಾಡಿದ್ದರು. ಇದೀಗ ಇದೇ ಚಿತ್ರದ ಪಾರ್ಟ್ 2 ಅನ್ನು ತೆರೆಗೆ ತರೋದರ ಬಗ್ಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.