ಆರ್ಥಿಕ ಸಂಕಷ್ಟ; ರಾತ್ರೋರಾತ್ರಿ ಬೀಗ ಜಡಿದ ಕಂಪೆನಿ?
ಬೆಂಗಳೂರು, : ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಬರಾಜು ಮಾಡುವಕಂಪೆನಿಯೊಂದು ಬೆಂಗಳೂರಿನಲ್ಲಿ ರಾತ್ರೋರಾತ್ರಿ ಬೀಗ ಹಾಕಿದೆ ಎನ್ನುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಹೊರಭಾಗದ ಬಿಡದಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರ್ರೈ.
ನ.4ರಂದು ಖಾಯಂ ಕಾರ್ಮಿಕರು ಕೆಲಸ ಮುಗಿಸಿ ಸಂಜೆ ಮನೆಗೆ ತೆರಳಿದ್ದಾರೆ. ಸೋಮವಾರ ಕಾರ್ಮಿಕರನ್ನು ಕರೆದೊಯ್ದಲು ಯಾವುದೇ ವಾಹನ ಬಂದಿರಲಿಲ್ಲ. ತಮ್ಮ ವಾಹನಗಳಲ್ಲೇ ಕಂಪೆನಿಗೆ ಕಾರ್ಮಿಕರು ಆಗಮಿಸಿದ್ದಾರೆ. ಕಾರ್ಮಿಕರು ಒಳ ಬರುತ್ತಿದ್ದಂತೆ ಒಳಗೆ ಬಿಡದ ಭದ್ರತಾ ಸಿಬ್ಬಂದಿ, ಹೊರಗೆ ಕಳುಹಿಸಿದ್ದಾರೆ.
ನಮ್ಮ ಪೂರ್ವಾನುಮತಿಯಿಲ್ಲದೆ ಯಾವುದೇ ವ್ಯಕ್ತಿಗಳು ಕಂಪೆನಿಯ ಆವರಣಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಗೇಟ್‍ಬಳಿ ಕಂಪನಿವತಿಯಿಂದನೋಟಿಸ್ ಅಂಟಿಸಲಾಗಿದೆ.
ಮತ್ತೊಂದೆಡೆ ಮರುದಿನ 54 ಕಾರ್ಮಿಕರ ಬ್ಯಾಂಕ್ ಖಾತೆಗೆ 4 ಲಕ್ಷ ಹಣ ಕಂಪೆನಿ ಕಡೆಯಿಂದ ಜಮಾವಾಗಿದೆ. ಆದರೆ, ಈ ಬಗ್ಗೆ ಕಂಪೆನಿಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.