: ನಮ್ಮ ಮೆಟ್ರೋಗೆ 'ರಾಷ್ಟ್ರೀಯ ಶ್ರೇಷ್ಟತಾ ಪ್ರಶಸ್ತಿ

: ನಮ್ಮ ಮೆಟ್ರೋಗೆ 'ರಾಷ್ಟ್ರೀಯ ಶ್ರೇಷ್ಟತಾ ಪ್ರಶಸ್ತಿ

ಬೆಂಗಳೂರು : ಸೇವಾ ಸಮಯ ಪ್ರಜ್ಞೆ ಹಾಗೂ ಪ್ರಯಾಣಿಕರ ಅನುಕೂಲ ಸೇವೆಗಳನ್ನು ಗುರುತಿಸಿ ನಮ್ಮ ಮೆಟ್ರೋಗೆ ರಾಷ್ಟ್ರೀಯ ಶ್ರೇಷ್ಟತಾ ಪ್ರಶಸ್ತಿ ನೀಡಲಾಯಿತು.

ಕೊಚ್ಚಿಯಲ್ಲಿ ನಡೆದ 15 ನೇ ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಪರೆನ್ಸ್ ಸಮಾರಂಭದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ( ಬಿಎಂಆರ್ ಸಿ ಎಲ್  ಗೆ ಅತ್ಯುತ್ತಮ ಪ್ರಯಾಣಿಕ ಸೇವೆಗಳು ಮತ್ತು ತೃಪ್ತಿಗಾಗಿ ರಾಷ್ಟ್ರೀಯ ಶ್ರೇಷ್ಟತಾ ಪ್ರಶಸ್ತಿ ನೀಡಲಾಗಿದೆ.

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೇರಿ ಮತ್ತಿತರರ ಗಣ್ಯರ ಸಮ್ಮುಖದಲ್ಲಿ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಪರ್ವೇಜ್ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಯು ಮೆಟ್ರೋದ ಸೇವಾ ಸಮಯ ಪ್ರಜ್ಞೆ ಹಾಗೂ ಇತರ ಪ್ರಯಾಣಿಕರ ಅನುಕೂಲ ಸೇವೆಗಳನ್ನು ಗುರುತಿಸಿ ನೀಡಲಾಗಿದೆ.