ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ; 10 ಲಕ್ಷ 'BPL ಕಾರ್ಡ್' ರದ್ದು, ಇನ್ಮೇಲೆ ಇವ್ರಿಗೆ ರೇಷನ್ ಸಿಗೋಲ್ಲ
ನವದೆಹಲಿ : ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ ಮಾಹಿತಿ ಇಲ್ಲಿದ್ದು, ನೀವೂ ಸಹ ಈ ರೀತಿಯ ಪಡಿತರ ಚೀಟಿದಾರರಾಗಿದ್ದರೆ, ಶೀಘ್ರದಲ್ಲೇ ನಿಮ್ಮ ಕಾರ್ಡ್ ಸಹ ರದ್ದಾಗಲಿದೆ. ಕೇಂದ್ರ ಸರ್ಕಾರದಿಂದ ಪಡೆದ ಮಾಹಿತಿಯ ಪ್ರಕಾರ, ದೇಶಾದ್ಯಂತ ಲಕ್ಷಾಂತರ ಜನರ ಪಡಿತರ ಚೀಟಿಯನ್ನ ರದ್ದುಗೊಳಿಸಲಾಗುವುದು.
10 ಲಕ್ಷ ಕಾರ್ಡ್ ರದ್ದು.!
ದೇಶದಲ್ಲಿ ಸುಮಾರು 10 ಲಕ್ಷ ಜನರು ಉಚಿತ ಪಡಿತರ ಸೌಲಭ್ಯದ ಲಾಭವನ್ನ ಮೋಸದಿಂದ ಪಡೆಯುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ಈ ಎಲ್ಲಾ ಜನರ ಪಡಿತರ ಚೀಟಿಯನ್ನ ರದ್ದುಗೊಳಿಸಲಾಗುವುದು. ಸುಮಾರು 10 ಲಕ್ಷ ಜನರ ಪಡಿತರ ಚೀಟಿಗಳನ್ನ ಗುರುತಿಸಲಾಗಿದ್ದು, ಈ ಕಾರ್ಡ್'ಗಳನ್ನ ಶೀಘ್ರದಲ್ಲೇ ರದ್ದುಗೊಳಿಸಲಾಗುವುದು. ಅದ್ರಂತೆ, ಸರ್ಕಾರ ಈಗಾಗ್ಲೇ ತನ್ನ ಪಟ್ಟಿಯನ್ನ ಸಿದ್ಧಪಡಿಸಿದೆ.
80 ಕೋಟಿ ಜನರಿಗೆ ಉಚಿತ ಪಡಿತರ.!
ಯಾರ ಕಾರ್ಡ್'ಗಳು ನಕಲಿ ಎಂದು ಕಂಡುಬಂದಿದೆಯೋ ಅಂತಹವರ ಕಾರ್ಡ್ ರದ್ದಾಗಲಿದೆ. ಪ್ರಸ್ತುತ, ದೇಶಾದ್ಯಂತ ಸುಮಾರು 80 ಕೋಟಿ ಜನರು ಉಚಿತ ಪಡಿತರ ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ. ಅನರ್ಹ ಪಡಿತರ ಚೀಟಿದಾರರಿಗೆ ಗೋಧಿ, ಅಕ್ಕಿ ಮತ್ತು ಕಡಲೆ ಉಚಿತ ಸಿಗುವುದಿಲ್ಲ.
ಪಟ್ಟಿಯನ್ನ ಡೀಲರ್'ಗೆ ಕಳುಹಿಸಲಾಗುತ್ತದೆ.!
ಅನರ್ಹರ ಸಂಪೂರ್ಣ ಪಟ್ಟಿಯನ್ನ ಡೀಲರ್'ಗೆ ಕಳುಹಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇದರ ನಂತರ, ವಿತರಕರು ಈ ಜನರಿಗೆ ಪಡಿತರವನ್ನ ನೀಡುವುದಿಲ್ಲ. ಡೀಲರ್ ಹೆಸರುಗಳನ್ನ ಗುರುತಿಸಿ ಮತ್ತು ಅಂತಹ ಕಾರ್ಡ್ ಹೊಂದಿರುವವರ ವರದಿಯನ್ನ ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತಾನೆ. ಅದರ ನಂತರ ಅವರ ಕಾರ್ಡ್'ಗಳನ್ನು ರದ್ದುಗೊಳಿಸಲಾಗುತ್ತದೆ.
ಯಾವ ಕಾರ್ಡ್ ರದ್ದಾಗುತ್ತೆ?
ಎನ್‌ಎಫ್‌ಎಸ್‌ಎಯಿಂದ ಪಡೆದ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಪಾವತಿಸುವ ಅಥವಾ 10 ಬಿಘಾಗಳಿಗಿಂತ(A measure of land equal to five-eighths) ಹೆಚ್ಚು ಭೂಮಿಯನ್ನ ಹೊಂದಿರುವ ಕಾರ್ಡ್ದಾರರ ಹೆಸರನ್ನ ಪಟ್ಟಿಯಿಂದ ಕಡಿತಗೊಳಿಸಲಾಗುತ್ತದೆ. ಅಂತಹ ಜನರಿಗೆ ಉಚಿತ ಪಡಿತರ ಸಿಗುವುದಿಲ್ಲ. ಅದೇ ಸಮಯದಲ್ಲಿ, ಕೆಲವು ಜನರು ಉಚಿತ ಪಡಿತರದೊಂದಿಗೆ ವ್ಯಾಪಾರ ಮಾಡುತ್ತಿದ್ದು, ಅಂತಹ ವ್ಯಕ್ತಿಗಳನ್ನ ಸಹ ಗುರುತಿಸಲಾಗಿದೆ. ಈ ಜನರ ಕಾರ್ಡ್'ಗಳನ್ನ ಸಹ ರದ್ದುಗೊಳಿಸಲಾಗುವುದು.