ಅಶ್ವತ್ಥ್ ನಾರಾಯಣ ಬಳಸಿರುವ ಪದ ಗೂಂಡಾ ಸಂಸ್ಕೃತಿ ತೋರಿಸುತ್ತೆ: ಬಸವರಾಜ ರಾಯರೆಡ್ಡಿ

ಹುಬ್ಬಳ್ಳಿ: ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ ಎಂಬ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಡಾ.ಅಶ್ವತ್ಥ್ ನಾರಾಯಣ ಬಳಸಿರುವ ಪದ ಗೂಂಡಾ ಸಂಸ್ಕೃತಿ ತೋರಿಸುತ್ತೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.
ಮಂತ್ರಿಯಾಗಿ ಹೀಗೆ ಮಾತನಾಡುವುದು ಅಸಭ್ಯ, ಗೂಂಡಾ ಸಂಸ್ಕೃತಿ. ರಾಜ್ಯಪಾಲರು ಕ್ರಮ ಕೈಗೊಳ್ಳಬೇಕೆಂದು ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ.
ಇತ್ತ, ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ' ಎಂಬ ಹೇಳಿಕೆಗೆ ಸಂಬಂಧಿಸಿ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅಶ್ವತ್ಥ್ ಸಂಸ್ಕೃತಿ, ಅವರ ಹೃದಯದಲ್ಲಿರುವ ಮಾತು ಹೊರ ಬಂದಿದೆ. ಉತ್ಸಾಹದಲ್ಲಿ ಮಾತಾಡುವಾಗ ಕೆಲವೊಂದು ಸಲ ಸತ್ಯ ಹೊರ ಬರುತ್ತೆ. ಬಿಜೆಪಿಯವರ ಸಿದ್ಧಾಂತ ಬೇರೆ, ಅವರ ಮನಸ್ಸಿನಲ್ಲಿರೋದೆ ಬೇರೆ. ಇದು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತೆ ಎಂದರು.