ಪುಣೆಯಲ್ಲಿ ತಮ್ಮ ಗುರು ಬೆಂಗಳೆ ಕಾಶೀನಾಥ ನಾಯ್ಕ ಮನೆಗೆ ಭೇಟಿ ನೀಡಿದ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

ಪುಣೆಯಲ್ಲಿ ತಮ್ಮ ಗುರು ಬೆಂಗಳೆ ಕಾಶೀನಾಥ ನಾಯ್ಕ ಮನೆಗೆ ಭೇಟಿ ನೀಡಿದ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

ಪುಣೆಯಲ್ಲಿ ತಮ್ಮ ಗುರು ಬೆಂಗಳೆ ಕಾಶೀನಾಥ ನಾಯ್ಕ ಮನೆಗೆ ಭೇಟಿ ನೀಡಿದ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

ಕಾರವಾರ: ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾ ಇಂದು (ಮಂಗಳವಾರ) ಉತ್ತರ ಕನ್ನಡ ಜಿಲ್ಲೆಯ ಮೂಲದ ತಮ್ಮ ಗುರುವಿಗೆ ಧನ್ಯವಾದ  ಸಲ್ಲಿಸಿದ್ದಾರೆ.
ನೀರಜ್ ಚೋಪ್ರಾ  ತಮ್ಮ ಮಾಜಿ ಕೋಚ್ ಕಾಶಿನಾಥ್  ಅವರನ್ನು ಭೇಟಿಯಾಗಿ ಗಮನ ಸೆಳೆದಿದ್ದಾರೆ.
೨೦೧೫ರಿಂದ ಸುಮಾರು ಮೂರು ವರ್ಷಗಳ ಕಾಲ ಜಾವಲಿನ್ ಎಸೆತದ ತರಬೇತಿ ನೀಡಿದ್ದ ಶಿರಸಿ ತಾಲೂಕಿನ ಬೆಂಗ್ಳೆ ಮೂಲದ ಕಾಶಿನಾಥ್ ನಾಯ್ಕ್ ಅವರ ಪುಣೆ ಮನೆಗೆ ಭೇಟಿ ನೀಡಿ ನೀರಜ್ ಚೋಪ್ರಾ ಅಭಿನಂದನೆ ಸಲ್ಲಿಸಿದ್ದಾರೆ.
ಪುಣೆಯ ಕೋರೆಗಾಂವ್ ನಲ್ಲಿರುವ ಕಾಶಿನಾಥ್ ನಾಯ್ಕ್ ಅವರ ಮನೆಗೆ ನೀರಜ್ ಚೋಪ್ರಾ ಆಗಮಿಸಿದ್ದರು. ಈ ವೇಳೆ ಕಾಶಿನಾಥ್ ನಾಯ್ಕ್ ಅವರ ಪತ್ನಿ ಚೈತ್ರಾ ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು. ಸುಮಾರು ಒಂದು ಗಂಟೆಗಳ ಕಾಲ ಗುರು-ಶಿಷ್ಯರು ಒಲಿಂಪಿಕ್ಸ್ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದರು.
ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್ಸ್ಟ್ಯೂಟ್‌ನಲ್ಲಿ ತರಬೇತುದಾರರಾಗಿರುವ ಕಾಶಿನಾಥ್ ೨೦೧೦ರ ನವದೆಹಲಿಯ ಕಾವನ್‌ವೆಲ್ತ್ ಗೇಮ್ಸ್ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. ೨೦೧೫ರಲ್ಲಿ ಕಾಶಿನಾಥ್ ಬಳಿ ತರಬೇತಿಗೆ ಸೇರಿದ್ದ ನೀರಜ್ ಚೋಪ್ರಾ, ೨೦೧೭ರ ವರೆಗೆ ತರಬೇತಿ ಪಡೆದಿದ್ದರು. ಅಂದೇ ೮೬.೪೮ ಮೀಟರ್ ಜೂನಿಯರ್ ವಿಶ್ವ ದಾಖಲೆ ಮಾಡಿದ್ದ ನೀರಜ್ ಚೋಪ್ರಾ ಅವರು ಇತ್ತೀಚಿಗೆ ವಿದೇಶಿ ತರಬೇತುದಾರರ ಬಳಿ ತರಬೇತಿ ಪಡೆಯಲಾರಂಭಿಸಿದ್ದರು.
ಪುಣೆಯಲ್ಲಿನ ಅವರ ಮನೆಗೆ ಭೇಟಿ ನೀಡಿ ಕುಟುಂಬದೊAದಿಗೆ ಕಾಲ ಕಳೆದಿದ್ದಾರೆ. ಈ ಮೂಲಕ ಕಾಶಿನಾಥ್ ಚಿನ್ನದ ಹುಡುಗ ನೀರಜ್ ಚೋಪ್ರಾ ಗುರುವಲ್ಲ ಎಂದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಟೋಕಿಯೋ ಒಲಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಂಗಳೆ ಗ್ರಾಮದ ಕಾಶೀನಾಥ ನಾಯ್ಕ ಹೆಸರು ಪ್ರಖ್ಯಾತಿಗೊಂಡಿತು. ನೀರಜ್ ಚೋಪ್ರಾಗೆ ಕಾಶಿನಾಥ್? ಕೂಡ ಈ ಹಿಂದೆ ತರಬೇತಿ ನೀಡಿದ್ದಾಗಿ ತಿಳಿಸಿದ್ದರು. ಚಿನ್ನದ ಹುಡುಗನ ಪರಿಶ್ರಮದ ಹಿಂದೆ ರಾಜ್ಯದ ಗುರುವಿನ ಪಾತ್ರಕ್ಕೆ ಮೆಚ್ಚು ರಾಜ್ಯ ಸರ್ಕಾರ ಕೂಡ ಕೋಚ್? ಕಾಶಿನಾಥ್?ಗೆ ೧೦ ಲಕ್ಷ ಬಹುಮಾನ ಪ್ರಶಸ್ತಿ ಘೋಷಿಸಿತು.
ಯಾವಾಗ ರಾಜ್ಯ ಸರ್ಕಾರ ಕಾಶಿನಾಥ್‌ಗೆ ನಗದು ಬಹುಮಾನ ಘೋಷಸಿತೋ ಅದರ ಬೆನ್ನಲ್ಲೇ ಕಾಶಿನಾಥ್? ನೀರಜ್? ಚೋಪ್ರಾ ಕೋಚ್? ಅಲ್ಲ ಎನ್ನುವ ಮೂಲಕ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಹೇಳಿಕೆ ರಾಜ್ಯದಲ್ಲಿ ಬಹು ಚರ್ಚೆಯಾಯಿತು.
ಇದಕ್ಕೆ ತಿರುಗೇಟು ನೀಡಿದ್ದ ಕಾಶೀನಾಥ್? ನೀರಜ?ಗೆ ಎರಡು ವರ್ಷ ತರಬೇತಿ ನೀಡಿದ್ದು, ೨೦೧೩-೧೯ರ ವರೆಗೂ ಇಂಡಿಯಾ ತಂಡದ ಕೋಚ್?? ಆಗಿ ಕಾರ್ಯ ನಿರ್ವಹಿಸುತ್ತಿದ್ದೆ ಎಂಬುದಕ್ಕೆ ಸಾಕ್ಷಿ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.